Jun 5, 2022, 11:46 AM IST
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಹುತಾತ್ಮರ ತ್ಯಾಗ ಬಲಿದಾನಗಳನ್ನು ನಿಮ್ಮೆದುರು ತರಲಾಗುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾದ ಹುತಾತ್ಮರನ್ನು ಪರಿಚಯಿಸಲಾಗುತ್ತಿದೆ. ಸಾಮಾನ್ಯ ಮಹಿಳೆಯರು ಅಸಾಮಾನ್ಯರಂತೆ ಹೋರಾಡಿದ ಕೆಲವು ಕಥೆಗಳಂತೂ ಮೈ ಜುಂ ಎನಿಸುವುದು.
India@75: ಸ್ವಾತಂತ್ರ ಹೋರಾಟದ ಪ್ರಮುಖ ನಾಯಕಿಯಾಗಿ ಬೆಳೆದ ಆಬಾದಿ ಬಾನು ಬೇಗಂ..!
ಭಾರತ ಸ್ವತಂತ್ರ ಹೋರಾಟದ ಮಹಾನ್ ನಾಯಕರ ಬಗ್ಗೆ ನಮಗೆಲ್ಲಾ ಗೊತ್ತು. ಬ್ರಿಟಿಷರಿಗೆ ಎದೆಯೊಡ್ಡಿದ ದಿಟ್ಟ ಮಹಿಳೆಯರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಅಂತವರಲ್ಲಿ ಭೋಗೇಶ್ವರಿ ಫುಕನಾನಿ (Bhogeswari Phukanani ) ಕೂಡಾ ಒಬ್ಬರು. ಅಸ್ಸಾಂನ ಬೆಹರಾಮ್‌ಪುರನ ಗೃಹಿಣಿ. ಗಾಂಧೀಜಿಯವರ ಪ್ರಭಾವದಿಂದ ದೇಶಾದ್ಯಂತ ಲಕ್ಷಾಂತರ ಮಹಿಳೆಯರು ಹೋರಾಟಕ್ಕೆ ಧುಮುಕುತ್ತಾರೆ. 1942 ರ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದಾಗ ಭೋಗೇಶ್ವರಿಗೆ 60 ವರ್ಷ. ಅಸ್ಸಾಂನಲ್ಲಿ ಎಲ್ಲೆಡೆ ಭಾರೀ ಹೋರಾಟ ನಡೆಯುತ್ತಿತ್ತು. ಬೆಹರಾಂಪುರದಲ್ಲಿ ಕಾಂಗ್ರೆಸ್ ಕಚೇರಿ ವಶಪಡಿಸಿಕೊಳ್ಳಲು ಬ್ರಿಟಿಷರು ಭಾರೀ ಪ್ರಯತ್ನ ನಡೆಸಿದರು. ಆಗ ಭೋಗೇಶ್ವರಿ ಬುಗುಲಾನಿ ತೀವ್ರ ಪ್ರತಿರೋಧ ಒಡ್ಡುತ್ತಾರೆ.