India@75: ಬ್ರಿಟಿಷ್‌ ಪೊಲೀಸರೆ ಎದುರೇ ತ್ರಿವರ್ಣ ಧ್ವಜ ಹಾರಿಸಿದ ಸಾಹಸಿ ಮಹಿಳೆ ಅರುಣಾ ಅಸಫ್ ಅಲಿ

Jul 4, 2022, 5:23 PM IST

ಆಗಸ್ಟ್ 09, 1942, ಭಾರತ ಸ್ವತಂತ್ರ ಸಂಗ್ರಾಮದ ಅವಿಸ್ಮರಣೀಯ ದಿನ. ಮುಂಬೈ ಗೊವಾಲಿಯಾ ಕೆರೆ ಮೈದಾನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಮ್ಮೇಳನ ನಡೆಸಲಾಯಿತು. ಕ್ವಿಟ್ ಇಂಡಿಯಾ ಚಳುವಳಿ (Quit India Movement) ಪ್ರಾರಂಭಿಸುವ ಪ್ರಮುಖ ನಿರ್ಧಾರ ಇಲ್ಲಿ ತೆಗೆದುಕೊಳ್ಳಲಾಯಿತು. ಮಾಡು ಇಲ್ಲವೇ ಮಡಿ, ಬ್ರಿಟಿಷರು ಭಾರತ ಬಿಡುವವರೆಗೂ ವಿಶ್ರಾಂತಿ ಇಲ್ಲ ಎಂದು ಗಾಂಧೀಜಿ ಕರೆ ಕೊಡುತ್ತಾರೆ. ಗಾಂಧೀಜಿಯವರ ಭಾಷಣದ ಬಳಿಕ 33 ವರ್ಷದ ಮಹಿಳೆಯೊಬ್ಬರು ಮೈದಾನಕ್ಕೆ ನುಗ್ಗಿ ತ್ರಿವರ್ಣ ಧ್ವಜ ಹಿಡಿಯುತ್ತಾರೆ. ಆ ದಿಟ್ಟ ಮಹಿಳೆಯೇ ಅರುಣಾ ಆಸಫ್ ಅಲಿ (Aruna Asaf Ali) ಆಗಸ್ಟ್ ಕ್ರಾಂತಿಯ ರಾಣಿ ಎಂದೇ ಕರೆಯಲಾಗುತ್ತದೆ. ಕಾಲೇಜು ದಿನಗಳಿಂದಲೇ ಸ್ವತಂತ್ರ ಹೋರಾಟದ ಬಗ್ಗೆ ಆಸಕ್ತಿ ತಾಳುತ್ತಾರೆ. ಮುಂದೆ ಇವರ ಹೋರಾಟ ಹಾದಿ ಹೀಗಿತ್ತು. 

India@75:ಕಲಾಕ್ಷೇತ್ರಗಳಲ್ಲೂ ಸ್ವದೇಶಿ ಚಿಂತನೆ ತುಂಬಿದ ಅವನೇಂದ್ರ ಠಾಕೂರ್