Jun 9, 2022, 6:21 PM IST
ನವದೆಹಲಿ (ಜೂ. 09): ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ಆಂಧ್ರಪ್ರದೇಶ ಅಲ್ಲೂರಿ ಸೀತಾರಾಮ ರಾಜು (Alluri Sitarama Raju) ಎಂಬ ವೀರ ಸಂನ್ಯಾಸಿ ಕಥೆ ಇಲ್ಲಿದೆ. ಸಾವಿರಾರು ವರ್ಷಗಳಿಂದ ಪ್ರಕೃತಿಯನ್ನೇ ದೇವರು ಎಂದ ನಂಬಿಕೊಂಡು ಬಂದಂತಹ ಬುಡಕಟ್ಟು ಜನರ ಭೂಮಿಯನ್ನು ಹಲವು ರೀತಿಯಲ್ಲಿ ಕಿತ್ತುಕೊಳ್ಳಲಾಗುತ್ತಿದೆ. ಸ್ವಾತಂತ್ರ ಬಂದು 75 ವರ್ಷಗಳಾದರೂ ಅವರ ಪರಿಸ್ಥಿತಿ ಹೆಚ್ಚೇನೂ ಸುಧಾರಿಸಿಲ್ಲ.
ಇದನ್ನೂ ನೋಡಿ: ಮೇಘಾಲಯದ ಖಾಸಿ ಬೆಟ್ಟ ವಶಕ್ಕೆ ಮುಂದಾಗಿದ್ದ ಆಂಗ್ಲರ ವಿರುದ್ದ ಸೆಣಸಾಡಿದ್ದ ವೀರಯೋಧ ತಿರೋತ್ ಸಿಂಹ
ಕಾಡು ಜನರನ್ನ ಅವರ ಮೂಲ ನೆಲೆಯಿಂದ ಬೇರ್ಪಡಿಸುವ ಕೆಲಸ ಶುರುವಾಗಿದ್ದು ಆಂಗ್ಲರ ಕಾಲದಿಂದ. ಭಾರತದ ಕಾಡಿನಲ್ಲಿದ್ದ ಅಪಾರ ವನ್ಯ ಸಂಪತ್ತನ್ನು ಲೂಟಿ ಮಾಡಲು ಬ್ರಿಟಿಷರು ಅನೇಕ ಕಾನೂನುಗಳನ್ನೇ ತಂದಿದ್ದರು. ಅಂಥಹ ಜನವಿರೋಧಿ ಕಾನೂನುಗಳ ವಿರುದ್ಧ ಭಾರತದ ವಿವಿಧ ಭಾಗಗಳಲ್ಲಿ ಬುಡಕಟ್ಟು ಸಮುದಾಗ ಸಿಡಿದೆದ್ದಿತು. ಅವರಲ್ಲಿ ಆಂಧ್ರಪ್ರದೇಶ ಅಲ್ಲೂರಿ ಸೀತಾರಾಮ ರಾಜು ನೇತೃತ್ವದಲ್ಲಿ ಬಂದ ರಂಪ ದಂಗೆ ಪ್ರಮುಖವಾದ್ದದು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ