Jan 25, 2024, 5:10 PM IST
ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್ ಕೂಡ ಒಂದಾಗಿದೆ. ವರ್ಷದಲ್ಲಿ ಬರೋಬ್ಬರಿ1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಲಿವೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ರಕ್ತ ಹೆಪ್ಪುಗಟ್ಟುವಿಕೆ (blood clot)ಅಥವಾ ರಕ್ತಸ್ರಾವದಿಂದಾಗಿ ಮೆದುಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗುವ ಸ್ಥಿತಿ ಯನ್ನು ಸ್ಟ್ರೋಕ್ ಎನ್ನಲಾಗುತ್ತೆ. ಸ್ಟ್ರೋಕ್ ಆದಾಗ ಕೆಲವರಿಗೆ ಬಾಯಿ, ಗಂಟಲು ವೀಕ್ ಆಗಿ ಮಾತನಾಡಲು ಸಹ ತೊಂದ್ರೆಯಾಗುತ್ತೆ. ಈ ಬಗ್ಗೆ ತಜ್ಞ ವೈದ್ಯರು ನೀಡಿರೋ ಮಾಹಿತಿ ಇಲ್ಲಿದೆ.