Apr 12, 2023, 10:17 AM IST
ಬೇಸಿಗೆಯಲ್ಲಿ ಸಾಮಾನ್ಯವಾಗಿ ತುಂಬಾ ಸುಸ್ತು ಕಾಡುತ್ತೆ. ಹಸಿವಾದ ಅನುಭವವಾಗುವುದಿಲ್ಲ. ಹೆಚ್ಚು ಬಾಯಾರಿಕೆ ಆಗುತ್ತೆ. ಏನು ತಿಂದ್ರೂ ನಾಲಿಗೆಗೆ ರುಚಿಸುವುದಿಲ್ಲ. ಹೀಗಾಗಿಯೇ ಆರೋಗ್ಯ ಹದಗೆಡುತ್ತೆ. ಆದ್ರೆ ಕೆಲವೊಬ್ಬರಿಗೆ ಮಾಂಸಾಹಾರ ತುಂಬಾ ಇಷ್ಟ. ಬರೀ ವೀಕೆಂಡ್‌ಗಳಲ್ಲಿ ಮಾತ್ರವಲ್ಲ ದಿನಾವೂ ಚಿಕನ್, ಮಟನ್ ಅಂತ ಏನಾದ್ರೂ ಇದ್ರೇನೆ ಊಟ ಸೇರೋದು. ಸಮ್ಮರ್ ಅಂತಾನೂ ಇಂಥವರು ನಾನ್‌ವೆಜ್ ತಿನ್ನೋದನ್ನು ಬಿಡೋದಿಲ್ಲ. ಆದ್ರೆ ಬಿಸಿಲಿನ ತಾಪ ಹೆಚ್ಚಾಗಿರುವಾಗ ಸಿಕ್ಕಾಪಟ್ಟೆ ಮಾಂಸಾಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾ? ಬೇಸಿಗೆಯಲ್ಲಿ ಹೆಚ್ಚು ನಾನ್‌ವೆಜ್ ತಿಂದ್ರೆ ಏನಾಗುತ್ತೆ? ಈ ಬಗ್ಗೆ ತಜ್ಞ ವೈದ್ಯರಾದ ಡಾ.ಸಾಯಿಕಿರಣ್ ಏನ್ ಹೇಳ್ತಾರೆ ನೋಡೋಣ.