ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ವಿಪರೀತ ಸುಸ್ತು, ಅಲರ್ಜಿ, ಚರ್ಮದ ತುರಿಕೆ ಮೊದಲಾದ ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ಮುಖ್ಯವಾಗಿ ಎಲ್ಲರೂ ಆಯಾಸದ ಅನುಭವವಾಗುತ್ತದೆ. ಇದಕ್ಕೇನು ಕಾರಣ.
ಬೇಸಿಗೆಯಲ್ಲಿ ನೀರಿನಂಶ ಎಲ್ಲವೂ ಬೆವರಿನ ಮೂಲಕ ದೇಹದಿಂದ ಹೋಗಿ ಬಿಡುತ್ತದೆ. ಹೀಗಾದಾಗ ದೇಹಕ್ಕೆ ಡಿಹೈಡ್ರೇಶನ್ ಸಮಸ್ಯೆ ಕಾಡುತ್ತದೆ. ಅಂಥಾ ಸಂದರ್ಭದಲ್ಲಿ ಸಹಜವಾಗಿಯೇ ಸುಸ್ತಾಗಲು ಶುರುವಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಯಾವಾಗಲೂ ನೀರಿನ ಬಾಟಲ್‌ನ್ನು ಜೊತೆಯಲ್ಲಿಯೇ ಇಟ್ಟುಕೊಂಡಿರಿ. ಅರ್ಧಗಂಟೆಗೊಮ್ಮೆ ನೀರು ಕುಡಿಯುತ್ತಿರಿ, ಇದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ಸುಸ್ತಾದ ಅನುಭವ ಆಗುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಜ್ಞ ವೈದ್ಯರಾದ ಡಾ.ಸಾಯಿಕಿರಣ್ ನೀಡಿದ್ದಾರೆ.