ಕಿಡ್ನಿ ಸ್ನೋನ್ ಸಮಸ್ಯೆ ಇತ್ತೀಚಿಗೆ ಸಾಮಾನ್ಯವಾಗಿದೆ. ಇದನ್ನು ತೆಗೆಯಲು ನಾನಾ ರೀತಿಯ ಚಿಕಿತ್ಸೆ ಲಭ್ಯವಿದೆ. ಕಿಡ್ನಿ ಸ್ಟೋನ್ ಯಾವ ರೀತಿಯದ್ದು, ಎಲ್ಲಿದೆ ಎಂಬುದನ್ನು ತಿಳಿದುಕೊಂಡು ಚಿಕಿತ್ಸೆ ನೀಡಲು, ಇದನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ.
ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಕಿಡ್ನಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ ಮೊದಲೇ ಟೆಸ್ಟ್ ಮಾಡಿಕೊಳ್ಳುವ ಮೂಲಕ ಕಾಯಿಲೆಯ ಬಗ್ಗೆ ತಿಳಿದು ಸೂಕ್ತ ಟ್ರೀಟ್‌ಮೆಂಟ್ ಪಡೆದುಕೊಳ್ಳಬಹುದು. ಮಾತ್ರವಲ್ಲ ಬಾಸ್ಕೆಟ್ ಮಾಡಿ ಕಿಡ್ನಿ ಸ್ಟೋನ್ ತೆಗೆಯಲು ಸಾಧ್ಯವಾಗುತ್ತದೆ. ಲೇಸರ್‌ನಲ್ಲಿ ಕಿಡ್ನಿ ಸ್ಟೋನ್ ಒಡೆದು ಹೊರಗೆ ಬರುವಂತೆ ಮಾಡಬಬಹುದು. ಅಷ್ಟೇ ಅಲ್ಲ, ಕಿಡ್ನಿ ಸ್ಟೋನ್ ಹೊರಗಡೆ ಇದ್ರೆ, ಶಾಕ್ ಕೊಟ್ಟು ತೆಗೆಯಬಹುದು ಎಂದು ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಎಚ್. ಸುದರ್ಶನ್ ಬಲ್ಲಾಳ್ ಮಾಹಿತಿ ನೀಡಿದ್ದಾರೆ.