ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಬಹುತೇಕರು ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಕೋವಿಡ್ ಸೋಂಕಿನ ಹರಡುವಿಕೆಯ ನಂತ್ರ, ಲಸಿಕೆ ಹಾಕಿಸಿಕೊಂಡ ಬಳಿಕ ಹಾರ್ಟ್‌ಅಟ್ಯಾಕ್ ಹೆಚ್ಚಾಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದು ಎಷ್ಟರಮಟ್ಟಿಗೆ ನಿಜ?
ಹಾರ್ಟ್ ಅಟ್ಯಾಕ್ ಅನ್ನೋದು ಇತ್ತೀಚಿನ ವರ್ಷಗಳಲ್ಲಿ ಸಾವಿಗೆ ಸಾಮಾನ್ಯ ಕಾರಣವಾಗಿಬಿಟ್ಟಿದೆ. ಮಕ್ಕಳು, ವೃದ್ಧರು ಎಂಬ ವಯಸ್ಸಿನ ವ್ಯತ್ಯಾಸವಿಲ್ಲದೆ ಜನರು ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್ ಹೆಚ್ಚಾಗ್ತಿದೆ ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ. ಇನ್ನು ಕೆಲವರು ಕೊರೋನಾ ಲಸಿಕೆಯನ್ನು ಹಾಕಿಸಿಕೊಂಡ ನಂತರ ಹೃದಯಾಘಾತ ಹೆಚ್ಚಾಗ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದರ ಅಸಲಿಯತ್ತೇನು? ಕೋವಿಡ್ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್ ಹೆಚ್ಚಾಗ್ತಿದೆ ಅನ್ನೋ ಬಗ್ಗೆ ತಜ್ಞ ವೈದ್ಯರು ಏನಂತಾರೆ ತಿಳಿಯೋಣ.