Apr 5, 2024, 3:12 PM IST
ಪುಟ್ಟ ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಬೆಳೆಯೋ ವಯಸ್ಸಿನಲ್ಲಿ ಮಕ್ಕಳು ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯಿಂದ ಬಳಲ್ತಿರ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳಲ್ಲಿ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳು ಹೆಚ್ಚಾಗಿ ಚಾಕೋಲೇಟ್, ಸ್ವೀಟ್ಸ್‌ನ್ನು ತಿನ್ನೋ ಕಾರಣ ಈ ಸಮಸ್ಯೆ ಸಾಮಾನ್ಯವಾಗಿದೆ. ಹೀಗಾಗಿ ಮಕ್ಕಳ ಹಲ್ಲುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದುದು ಅಗತ್ಯವಾಗಿದೆ. ಇಷ್ಟಕ್ಕೂ ಮಕ್ಕಳ ಹಲ್ಲು ಹುಳುಕಾಗುವುದು ಹೇಗೆ? ಬಾಯಿ ಹುಳುಕು ಬಾಯಿಂದ ಬಾಯಿಗೆ ಹರಡುತ್ತಾ? ಈ ಬಗ್ಗೆ ಮಕ್ಕಳ ತಜ್ಞ ಡಾ.ಪ್ರವೀಣ್ ಮಾಹಿತಿ ನೀಡಿದ್ದಾರೆ.