ಕೊರೋನಾ ಎಫೆಕ್ಟ್: ಇಟಲಿ ಜನರ ಬದುಕಿಗೆ ಕೊಳ್ಳಿಯಿಟ್ಟ ಫುಟ್ಬಾಲ್ ಆಟ..!

Mar 29, 2020, 3:14 PM IST

ನವದೆಹಲಿ(ಮಾ.29):ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್ ಇಟಲಿ ದೇಶವನ್ನು ಹೈರಾಣು ಮಾಡಿದೆ. ಕೊರೋನಾ ವೈರಸ್ ಚೀನಾದ ವುಹಾನ್‌ನಲ್ಲಿ ಆರಂಭವಾಗಿದ್ದರೂ, ಆತಿಹೆಚ್ಚು ಜನರನ್ನು ಬಲಿ ಪಡೆದದ್ದು ಇಟಲಿ ಜನರನ್ನು, ಆನಂತರದ ಸ್ಥಾನ ಸ್ಪೇನ್‌ನದ್ದು..!

ಇಟಲಿಯಲ್ಲಿ ಕೊರೋನಾ ಹರಡಲು ಫುಟ್ಬಾಲ್‌ ಪಂದ್ಯ ಕಾರಣ?

ಈ ಎರಡು ದೇಶಗಳ ಪಾಲಿಗೆ ಫುಟ್ಬಾಲ್ ಕ್ರೀಡೆ ಜನರ ಉಸಿರಾಗಿತ್ತು. ಭಾರತದಲ್ಲಿ ಕ್ರಿಕೆಟ್‌ ಹೇಗೋ, ಇಟಲಿ, ಸ್ಪೇನ್‌ನಲ್ಲಿ ಫುಟ್ಬಾಲ್ ಪಂದ್ಯವನ್ನು ನೋಡಲು ಜನ ಮುಗಿಬೀಳುತ್ತಾರೆ. ಈಗ ಅದೇ ಕ್ರೀಡೆ ಜನರ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ.

ಕೊರೋನಾ ವೈರಸ್ ಎಫೆಕ್ಟ್: ಉರುಗ್ವೆ ಕೋಚ್‌ ಸೇರಿ 400 ಮಂದಿ ವಜಾ!

ಒಂದೇ ಒಂದು ಫುಟ್ಬಾಲ್ ಪಂದ್ಯ ಎರಡು ದೇಶಗಳು ಬೆಚ್ಚಿಬೀಳುವಂತೆ ಮಾಡಿದೆ. ಯಾಕೆಂದರೆ ಕೋವಿಡ್ 19 ವೈರಸ್ ಆ ಮಟ್ಟಿಗೆ ಉಭಯ ದೇಶಗಳಿಗೆ ಪೆಟ್ಟುಕೊಟ್ಟಿದೆ. ಈ ಕುರಿತಾದ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.