ಅಬ್ಬಾ ಏನ್ ರುಚಿ, ಏನ್ ಪರಿಮಳ, ಬಾಯಲ್ಲಿ ಹಾಕಿಕೊಂಡರೆ ಸ್ವರ್ಗಕ್ಕೆ ಮೂರೇ ಗೇಣು ನೋಡಿ. ಒಂದ್ ಸಲ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂಬ ಆಸೆ ! ಹಾವೇರಿಯ ಬ್ಯಾಡಗಿ ಮೆಣಸಿಕಾಯಿ ವಿಶ್ವ ಪ್ರಸಿದ್ಧಿ ಗಳಿಸಿದೆ. ಹಾವೇರಿಯ ಯಾಲಕ್ಕಿ ಮಾಲೆ ಕಂಪು ಜಗತ್ತನೇ ಹರಡಿದೆ.
ಅಬ್ಬಾ ಏನ್ ರುಚಿ, ಏನ್ ಪರಿಮಳ, ಬಾಯಲ್ಲಿ ಹಾಕಿಕೊಂಡರೆ ಸ್ವರ್ಗಕ್ಕೆ ಮೂರೇ ಗೇಣು ನೋಡಿ. ಒಂದ್ ಸಲ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂಬ ಆಸೆ ! ಹಾವೇರಿಯ ಬ್ಯಾಡಗಿ ಮೆಣಸಿಕಾಯಿ ವಿಶ್ವ ಪ್ರಸಿದ್ಧಿ ಗಳಿಸಿದೆ. ಹಾವೇರಿಯ ಯಾಲಕ್ಕಿ ಮಾಲೆ ಕಂಪು ಜಗತ್ತನೇ ಹರಡಿದೆ. ಅದೇ ರೀತಿ ನವಾಬರ ನಾಡಾಗಿದ್ದ ಸವಣೂರು ಜಗತ್ಪ್ರಸಿದ್ಧ ತಿಂಡಿಯೊಂದಕ್ಕೆ ಹೆಸರಾಗಿದೆ.
ಅದೇ ಸವಣೂರು ಶಿವಲಾಲ್ ಖಾರಾ.. ಅಬ್ಬಾ ಏನ್ ರುಚಿ, ಏನ್ ಪರಿಮಳ, ಬಾಯಲ್ಲಿ ಹಾಕಿಕೊಂಡರೆ ಸ್ವರ್ಗಕ್ಕೆ ಮೂರೇ ಗೇಣು ನೋಡಿ. ನವಾಬರಾಳಿದ ಸವಣೂರು ಹಾವೇರಿಯ ಪ್ರಮುಖ ತಾಲೂಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕ್ಷೇತ್ರವೂ ಹೌದು. ಇಲ್ಲಿ ಸವಣೂರು ಖಾರಾ ಭಾರಿ ಫೇಮಸ್. ಖಾರಾ ಅಂದರೆ ಬೆಂಗಳೂರು ಮಂದಿ ಖಾರದ ಪುಡಿ ಅಂತ ತಿಳಿದುಕೊಂಡಿದ್ರೆ ತಪ್ಪು. ಖಾರಾ ಅಂದರೆ ಮಿಕ್ಚರ್. ಕೆಲವು ಕಡೆ ದಾಣಿ ಅಂತಾನೂ ಕರೆಯುತ್ತಾರೆ.
ಸವಣೂರು ಖಾರಾ ಅಂದರೆ ಅದಕ್ಕೊಂದು ಐತಿಹಾಸಿಕ ಹಿನ್ನಲೆಯೇ ಇದೆ. ಬಹುಶಃ ನಿಮಗೂ ಸವಣೂರು ಖಾರಾ ಇತಿಹಾಸ ಕೇಳಿದರೆ ಆಶ್ಚರ್ಯ ಆಗಬಹುದು. ಮೂಲತಃ ಸವಣೂರು ಖಾರಾ ಮೂಲ ಗುಜರಾತ್ ಅಂದರೆ ನೀವು ನಂಬಲೇ ಬೇಕು. 1929 ರಲ್ಲಿ ಸವಣೂರಿನ ನವಾಬರಾದ ಮಜೀದ್ ಖಾನ್ ನವಾಬ್ ಗುಜರಾತ್ ಪ್ರವಾಸಕ್ಕೆ ತೆರಳಿದ್ದರು. ಅಂದು ಗುಜರಾತ್ ನ ರಾಜ್ ಕೋಟ್ ನಲ್ಲಿ ದಯಾಲ್ ಜಿ ಭಾಯ್ ಕೇಥ್ ಜಿ ಭಾಯ್ ಕೋಟಕ್ ( ಶಿವಲಾಲ್) ಪರಿಚಯ ಆಗುತ್ತದೆ. ಅಂದು ನವಾಬರಿಗೆ ಸವಿಯಲು ಖಾರಾ ನೀಡಿದ ಶಿವಲಾಲ್ ನವಾಬರ ಮನಸ್ಸು ಗೆಲ್ಲುತ್ತಾರೆ. ಖಾರಾ ರುಚಿಗೆ ಮನಸೋತ ನವಾಬರು ಶಿವಲಾಲ್ ಅವರನ್ನು ಸವಣೂರಿಗೆ ಆಹ್ವಾನಿಸುತ್ತಾರೆ. ಅಂದು 1931 ರಂದು ಸವಣೂರಿನಲ್ಲಿ ಶಿವಲಾಲ್ ಅವರು ಖಾರಾ ತಯಾರಿಸಲು ಆರಂಭ ಮಾಡಿದರು. ಅಂದಿನಿಂದ ಒಂದೇ ರುಚಿ, ಒಂದೇ ಕ್ವಾಲಿಟಿ. ಶಿವಲಾಲ್ ಅವರ ನಿಧನದ ಬಳಿಕ ಅವರ ಪುತ್ರ ಜಯಂತ್ ಕೋಟಕ್ ಸವಣೂರು ಖಾರಾ ರುಚಿ ಉಣಬಡಿಸುತ್ತಿದ್ದಾರೆ.
ಬರ್ತಡೆ, ಮದುವೆ, ನಾಮಕರಣ ಅಂತ ಬಂದ ಬೀಗರು, ಸ್ನೇಹಿತರಿಗೆ ಅಂತ ಸವಣೂರು ಖಾರಾ ಪ್ಯಾಕೇಟ್ ಕೊಟ್ಟು ಕಳಿಸ್ತಾರೆ ಸವಣೂರು ಮಂದಿ. ಹೊರ ರಾಜ್ಯದವರಿಗೂ ಈ ಸವಣೂರು ಖಾರಾ ಅಚ್ಚು ಮೆಚ್ಚು. ಸವಣೂರು ಖಾರಾ ರುಚಿಗೆ ಮನಸೋಲದವರಿಲ್ಲ. ಒಂದ್ ಸಲ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂಬ ಆಸೆ ಹುಟ್ಟುತ್ತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಸವಣೂರು ಖಾರಾ ರುಚಿಗೆ ಮನಸೋತಿದ್ದಾರೆ.