ಇಲಿ ಗಣಪತಿಯ ವಾಹನವಾಗಿದ್ಹೇಗೆ?

Oct 21, 2020, 4:29 PM IST

ಒಮ್ಮೆ ಇಂದ್ರಸಭೆಯಲ್ಲಿ ಕ್ರೌಂಚ ಎಂಬ ಗಂಧರ್ವನು ತಿಳಿಯದೇ ವಾಮದೇವನನ್ನು ಕಾಲಿನಿಂದ ತುಳಿದು ಬಿಡುತ್ತಾನೆ. ವಾಮದೇವ ಕೋಪದಿಂದ ಇಲಿಯಾಗು ಅಂತ ಶಾಪ ಕೊಡುತ್ತಾನೆ. ಕ್ರೌಂಚನು ತಪ್ಪಾಯ್ತು ಎಂದು ಕ್ಷಮೆ ಕೇಳುತ್ತಾನೆ. ಆಗ, ನೀನು ಗಣಪತಿಯ ವಾಹನವಾಗಿ ಸ್ವಲ್ಪ ಕಾಲ ಸೇವೆ ಮಾಡು. ಶಾಪ ವಿಮೋಚನೆಯಾಗುತ್ತದೆ' ಎನ್ನುತ್ತಾನೆ.

ಸಿಂಧೂರನನ್ನು ಸಂಹರಿಸುವುದಾಗಿ ಪಾರ್ವತಿಗೆ ಮಾತು ಕೊಟ್ಟ ಗಣಪತಿ; ಮುಂದೆ ನಡೆದಿದ್ದೇನು?

ಆಗ ಇಲಿ ಪರಾಶರ ಮುನಿಯ ಆಶ್ರಮಕ್ಕೆ ಬಂದು ಆಹಾರ ಧಾನ್ಯಗಳನ್ನು ಹಾಳು ಮಾಡುತ್ತದೆ. ಆಗ ಗಣಪತಿ ಇಲಿಯನ್ನು ಹಿಡಿದು ಅದರ ಮೇಲೆ ಕೂರುತ್ತಾನೆ. ಕೂಡಲೇ ಇಲಿ, ಗಂಧರ್ವ ರೂಪವನ್ನು ತಾಳುತ್ತಾನೆ.