ಶಿವಪೂಜೆಗೆ ಕೇದಿಗೆ ಹೂವು ಏಕೆ ಸಲ್ಲುವುದಿಲ್ಲ...?

Jun 7, 2021, 3:32 PM IST

ಒಮ್ಮೆ ಬ್ರಹ್ಮ- ವಿಷ್ಣುವಿಗೆ ತಮ್ಮಿಬ್ಬರಲ್ಲಿ ಯಾರೂ ದೊಡ್ಡವರು ಎಂಬ ಚರ್ಚೆ ಶುರುವಾಗುತ್ತದೆ. ಆದ ಜ್ಯೋತಿರ್ಲಿಂಗ ಆವಿರ್ಭವಿಸುತ್ತದೆ. ಅದರ ತುದಿಯನ್ನು ಯಾರು ಮೊದಲು ಕಂಡು ಹಿಡಿಯುತ್ತಾರೋ ಅವರೇ ದೊಡ್ಡವರು ಎಂದು ಹೇಳಿಕೊಳ್ಳುತ್ತಾರೆ.

ಬ್ರಹ್ಮ ಹಂಸವಾಹನನಾಗಿ, ವಿಷ್ಣು ಗರುಡ ವಾಹನನಾಗಿ ಹೊರಡುತ್ತಾರೆ. ಇಬ್ಬರಿಗೂ ತುದಿ, ತಲೆ ಎರಡೂ ಸಿಗಲಿಲ್ಲ. ಹೀಗೆ ಹುಡುಕುವಾಗ ತಾಳೆ ಹೂವು ಉದುರಿ ಬೀಳುತ್ತಿರುತ್ತದೆ. ಆಗ ಬ್ರಹ್ಮದೇವ, ಉಪಾಯ ಮಾಡಿ, ನಾನು ಲಿಂಗದ ಊರ್ಧ್ವ ಭಾಗ ನೋಡಿ, ಅಲ್ಲಿಂದಲೇ ಈ ಹೂವನ್ನು ತಂದೆ ಎನ್ನುತ್ತಾನೆ. ವಿಷ್ಣುವಿಗೆ ನಂಬಿಕೆ ಬರಲಿಲ್ಲ. ಅವನು ಶಿವನನ್ನು ಕೇಳಿದ. ಬ್ರಹ್ಮ, ಕೇದಗಿ ಹೂವು ಇಬ್ಬರೂ ಹೇಳುತ್ತಿರುವುದು ಅಸತ್ಯ ಎನ್ನುತ್ತಾರೆ. ಹಾಗಾಗಿ ಕೇದಿಗೆ ಹೂವು ಶಿವಪೂಜೆಗೆ ಸಲ್ಲ.