Sushma Hegde | Published: Jan 2, 2023, 10:44 AM IST
ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ವಿಷ್ಣುವಿನ ದರ್ಶನ ಮಾಡಿದ್ರೆ ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆ ಇದೆ. ಹೊಸ ವರ್ಷದ ಆರಂಭದಲ್ಲೇ ವೈಕುಂಠ ಏಕಾದಶಿ ಸಂಭ್ರಮ ಬಂದಿದ್ದು, ಏಕಾದಶಿ ದಿನ ನಾಡಿನಾದ್ಯಂತ ಭಕ್ತರಿಂದ ವಿಷ್ಣು ನಾಮಸ್ಮರಣೆ ಮಾಡಲಾಗುತ್ತದೆ. ವೈಕುಂಠ ಏಕಾದಶಿ ಈ ದಿನವನ್ನು ಹಿಂದೂಗಳು ತುಂಬಾ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಹಾಗಾದ್ರೆ ವೈಕುಂಟ ಏಕಾದಶಿ ಹಿನ್ನೆಲೆ ಏನು? ಇವತ್ತು ಸಾಕಷ್ಟು ಜನ ಉಪವಾಸವಿದ್ದು ವಿಷ್ಣುವಿನ ಪೂಜೆಯನ್ನು ಮಾಡುತ್ತಾರೆ?. ಹಾಗಾದ್ರೆ ಈ ದಿನ ವಿಷ್ಣುವಿನ ಪೂಜೆಯನ್ನು ಯಾವ ರೀತಿಯಲ್ಲಿ ಮಾಡಬೇಕಾಗತ್ತೆ. ಹಾಗೆ ಇದರ ಪೌರಾಣಿಕ ಹಿನ್ನೆಲೆ ಏನು ಎಲ್ಲದರ ಬಗ್ಗೆ ಶ್ರೀಕಮಠ ಶಾಸ್ತ್ರಿಗಳು ತಿಳಿಸಿದ್ದಾರೆ.