Uttara Kannada: ಉಪಯೋಗಿಸಿದ ವಸ್ತುಗಳನ್ನು ಮಾರಿಕಾಂಬೆಗೆ ಹರಕೆಯಾಗಿ ಸಲ್ಲಿಸುವ ಪದ್ಧತಿ

Uttara Kannada: ಉಪಯೋಗಿಸಿದ ವಸ್ತುಗಳನ್ನು ಮಾರಿಕಾಂಬೆಗೆ ಹರಕೆಯಾಗಿ ಸಲ್ಲಿಸುವ ಪದ್ಧತಿ

Published : Apr 03, 2022, 09:42 AM IST

- ಉಪಯೋಗಿಸಿದ ವಸ್ತುಗಳನ್ನು ದೇವರಿಗೆ ಹರಕೆಯಾಗಿ ಸಲ್ಲಿಸುವ ಪದ್ಧತಿ

- ದೇವಸ್ಥಾನದ ಬಳಿಕ ರಾಶಿ ರಾಶಿಯಾಗಿ ಸಂಗ್ರಹವಾಗಿರುವುದು ಕಸವಲ್ಲ! 

- ಗಡಿ ಮಾರಿ ಅಥವಾ ಸೀಮೆ ಮಾರಿ ಎಂದು ಕರೆಯಲ್ಪಡುವ ದೇವಿಗೆ ಹರಕೆ
 

ಕಾರವಾರ (ಏ. 03): ಜನರಿಗೆ ಕಷ್ಟಗಳು, ಸಮಸ್ಯೆಗಳು ಎದುರಾದಾಗ ದೇವರನ್ನು ನೆನೆದು ವಿವಿಧ ರೀತಿಯ ಹರಕೆಗಳನ್ನು ಸಲ್ಲಿಸುವುದು ಸಾಮಾನ್ಯ. ಸೀರೆ, ಗಂಟೆ, ಆಭರಣ, ಹೂವು-ಹಣ್ಣು, ವಿವಿಧ ಪೂಜೆ, ಅನ್ನಸಂತರ್ಪಣೆಯಂತಹ ಸೇವೆಗಳನ್ನು ಹರಕೆಯಾಗಿ ದೇವರಿಗೆ ಸಲ್ಲಿಸಲಾಗುತ್ತದೆ. ಆದರೆ, ಇಲ್ಲೊಂದು ಕಡೆ ಮಾತ್ರ ಮನೆಯಲ್ಲಿ ಉಪಯೋಗಿಸಿದಂತಹ ವಸ್ತುಗಳನ್ನು ದೇವರಿಗೆ ಹರಕೆಯಾಗಿ ಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ. 

ದಕ್ಷಿಣ ಭಾರತದ ಜಾಗೃತ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಶಕ್ತಿ ದೇವತೆಗಳಲ್ಲಿ ಒಂದೆನಿಸಿದ್ದು, ಈ ದೇವರಿಗೆ ಯಾವುದೇ ಹರಕೆ ಹೊತ್ತುಕೊಂಡಲ್ಲಿ ಅದು ಈಡೇರುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಅದರಂತೆ ಗಡಿ ಮಾರಿ ಅಥವಾ ಸೀಮೆ ಮಾರಿ ಎಂದು ಕರೆಯಲ್ಪಡುವ ದೇವಿಗೆ ಹರಕೆ ಸಲ್ಲಿಸುವುದು ಪ್ರತಿಯೊಂದು ಗ್ರಾಮದಲ್ಲಿ ಆಚರಣೆಯಲ್ಲಿದೆ. ತಮಗೆ ಎದುರಾಗಿರುವ ಸಂಕಷ್ಟಗಳು, ರೋಗ ರುಜಿನಗಳು ದೂರಾಗಲಿ ಎಂದು ಹರಕೆಯನ್ನು ಹೊತ್ತುಕೊಳ್ಳಲಾಗುತ್ತದೆ.

ಅದರಂತೆ ತಾವು ಉಪಯೋಗಿಸಿದ ಬಟ್ಟೆ, ಬಳೆ, ತೊಟ್ಟಿಲು ಸೇರಿದಂತೆ ಮನೆಯಲ್ಲಿನ ವಸ್ತುವೊಂದನ್ನು ತಂದು ಗ್ರಾಮದ ಸೀಮೆಯಲ್ಲಿರುವ ಮಾರಿ ದೇವರ ಬಳಿ ಇಟ್ಟು ಹೋಗುತ್ತಾರೆ. ಹೀಗೆ ಮನೆಯಲ್ಲಿ ಉಪಯೋಗಿಸಲ್ಪಟ್ಟ ವಸ್ತುವನ್ನು ಹರಕೆ ರೂಪದಲ್ಲಿ ಸಲ್ಲಿಸಿದರೆ ತಮ್ಮ ಕಷ್ಟಗಳು ಅವುಗಳ ಮೂಲಕ ದೂರಾಗುತ್ತವೆ ಎನ್ನುವ ನಂಬಿಕೆಯಿದ್ದು, ಹೀಗೆ ಸಂಗ್ರಹವಾದ ಹರಕೆಯ ವಸ್ತುಗಳನ್ನು ವರ್ಷಕ್ಕೊಮ್ಮೆ ಆಯಾ ಗ್ರಾಮಸ್ಥರು ತಮ್ಮ ಗ್ರಾಮದ ಸೀಮೆಯಿಂದ ಪಕ್ಕದ ಗ್ರಾಮದ ಸೀಮೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ. 

ಇನ್ನು ಈ ಮಾರಿಹೊರೆ ಪ್ರತಿವರ್ಷ ಶಿರಸಿಯಿಂದ ಆರಂಭವಾಗಿ ಗ್ರಾಮದಿಂದ ಗ್ರಾಮಕ್ಕೆ ಸ್ಥಳಾಂತರವಾಗುತ್ತಾ ಸಾಗುತ್ತದೆ. ಆಯಾ ಗ್ರಾಮಗಳು ತಮ್ಮ ಸೀಮೆಯಿಂದ ನೆರೆಯ ಗ್ರಾಮದ ಸೀಮೆಗೆ ಮಾರಿ ಹೊರೆಯನ್ನು ದಾಟಿಸುತ್ತಾರೆ. ಹೀಗೆ ಬರುವ ಮಾರಿ ಹೊರೆ ಕಾರವಾರದ ಗೀತಾಂಜಲಿ ಚಿತ್ರಮಂದಿರ ಬಳಿಯಿರುವ ಮಾರಿದೇವಿ ದೇವಸ್ಥಾನದ ಬಳಿ ಸಂಗ್ರಹವಾಗುತ್ತದೆ. ವರ್ಷಕ್ಕೆ ಒಂದರಿಂದ ಎರಡು ಬಾರಿ ಹೀಗೆ ಸಂಗ್ರಹವಾಗುವ ಮಾರಿ ಹೊರೆಯನ್ನು ತಾಲ್ಲೂಕಿನ 18 ಗ್ರಾಮಗಳ ವಿವಿಧ ಸಮುದಾಯದವರು ಸೇರಿಕೊಂಡು ವಾಹನದಲ್ಲಿ ತುಂಬಿ ಮುಂದಿನ ಗ್ರಾಮದ ಸೀಮೆಗೆ ಕಳುಹಿಸಿಕೊಡುತ್ತಾರೆ. 

ಈ ಮಾರಿಹೊರೆಯನ್ನು ಕಳುಹಿಸಿಕೊಡುವವರೆಗೆ ಗ್ರಾಮದಲ್ಲಿ ಯಾವುದೇ ರೀತಿಯ ಉತ್ಸವ, ಜಾತ್ರೆಗಳಂತಹ ಕಾರ್ಯಗಳನ್ನು ಮಾಡುವಂತಿಲ್ಲ. ಇನ್ನು ಇಲ್ಲಿನ ಮಾರಿ ದೇವಿಗೆ ಉಪ್ಪಿನ ಹರಕೆ ನೀಡುವ ಆಚರಣೆಯಿದ್ದು, ಚರ್ಮ ಸಂಬಂಧಿ ಸಮಸ್ಯೆ ಎದುರಿಸುತ್ತಿರುವವರು ಈ ದೇವರಿಗೆ ಬೇಡಿಕೊಂಡು ಉಪ್ಪು ನೀಡಿದಲ್ಲಿ ಅವರ ಚರ್ಮ ರೋಗ ಗುಣವಾಗುತ್ತದೆ ಎನ್ನುವ ನಂಬಿಕೆಯಿದೆ. ತಲೆತಲಾಂತರಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದ್ದು, ಕಳೆದೆರಡು ವರ್ಷ ಕೊರೊನಾ ಕಾರಣದಿಂದಾಗಿ ಮಾರಿ ಹೊರೆ ಸಂಗ್ರಹವಾಗಿರಲಿಲ್ಲ. ಈ ಬಾರಿ ಬರೋಬ್ಬರಿ ಮೂರು ಲಾರಿಯಷ್ಟು ಮಾರಿಹೊರೆ ಸಂಗ್ರಹವಾಗಿದ್ದು, ಎಲ್ಲ ಸಮುದಾಯಗಳು ಸೇರಿಕೊಂಡು ಅದನ್ನು ಮುಂದಿನ ಗ್ರಾಮದ ಸೀಮೆಗೆ ಕಳುಹಿಸಿಕೊಟ್ಟಿದ್ದಾರೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more