Kashi Vishwanath Dham: ಶಿವನೇ ಸ್ಥಾಪಿಸಿದ ಮೋಕ್ಷ ನಗರಿ ಕಾಶಿ, ಇಲ್ಲಿನ ವಿಸ್ಮಯಗಳ ಬಗ್ಗೆ ತಿಳಿಯಿರಿ

Dec 15, 2021, 5:29 PM IST

ಬೆಂಗಳೂರು (ಡಿ. 15): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡಿಸೆಂಬರ್‌ 13ರಂದು ವಿಶ್ವನಾಥ ಮಂದಿರ ಮತ್ತು ಗಂಗಾ ನದಿಗೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ‘ಕಾಶಿ ವಿಶ್ವನಾಥ ಕಾರಿಡಾರ್‌’ (Kashi Vishwanath Corridar) ಯೋಜನೆಗೆ ಚಾಲನೆ ನೀಡಿದ್ದಾರೆ. 

Kashi Vishwanath Temple: ಕಾಶಿಯ ಕುರಿತ ಆಸಕ್ತಿಕರ ಸಂಗತಿಗಳಿವು

ವಾರಾಣಸಿಯ ಗತವೈಭವ ಮರಳಿದ ಈ ಸಂಭ್ರಮವನ್ನು ಮಕರ ಸಂಕ್ರಾಂತಿಯವರೆಗೆ ಒಂದು ತಿಂಗಳ ಕಾಲ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಕಾಶಿ ವಿಶ್ವನಾಥ ಕಾರಿಡಾರ್‌, ಅದರ ವಿಶೇಷತೆಗಳೇನು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಕಾಶಿ ಮೋಕ್ಷ ನಗರಿ. ಇಲ್ಲಿ ಮರಣ ಹೊಂದಿದರೆ ಭಗವಂತನಲ್ಲಿ ಲೀನವಾಗುತ್ತಾರೆ ಎಂಬ ನಂಬಿಕೆ ಇದೆ. ಕಾಶಿಯನ್ನು ಶಿವನ ಗರ್ಭ ಎನ್ನಲಾಗುತ್ತದೆ. ಇಲ್ಲಿ 9 ತಿಂಗಳು ಇದ್ದು, ಜಪ-ತಪ ಮಾಡುವುದರಿಂದ ನಮ್ಮ ಪಾಪಗಳು ಕಳೆಯುತ್ತದೆ ಎಂಬ ನಂಬಿಕೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಹೋಗಬೇಕು ಎನ್ನುವುದು ಯಾಕೆ..? ಇಲ್ಲಿದೆ ಉತ್ತರ. 
ಶಿವನೇ ಸ್ಥಾಪಿಸಿದ ಮೋಕ್ಷ ನಗರಿ ಕಾಶಿ, ಇಲ್ಲಿನ ವಿಸ್ಮಯಗಳ ಬಗ್ಗೆ ತಿಳಿಯಿರಿ