Nov 26, 2020, 12:04 PM IST
ನಾರದ ಮಹರ್ಷಿ ತನ್ನ ಹುಟ್ಟಿನ ವೃತ್ತಾಂತವನ್ನು ವ್ಯಾಸರಲ್ಲಿ ಹೇಳುತ್ತಾರೆ. ಭಗವಂತನ ಕುರಿತು, ಭಗವಂತನ ಬಗ್ಗೆ ಭಕ್ತಿ ಹುಟ್ಟಿಸುವ, ಮುಕ್ತಿ ನೀಡುವ, ಭಾಗವತವನ್ನು ರಚನೆ ಮಾಡಿ ಎಂದು ವ್ಯಾಸರಲ್ಲಿ ಮೊರೆ ಇಡುತ್ತಾರೆ. ಆಗ ವ್ಯಾಸರು 12 ಸ್ಕಂದಗಳ ಭಾಗವತವನ್ನು ರಚನೆ ಮಾಡುತ್ತಾರೆ.
ಇದರಲ್ಲಿ 344 ಅಧ್ಯಾಯಗಳು, 18 ಸಾವಿರ ಶ್ಲೋಕಗಳಿವೆ. ಪರಮಾತ್ಮನ 18 ರೂಪಗಳ ಬಗ್ಗೆ ಹೇಳಲಾಗಿದೆ. ಪುರಾಣಕ್ಕಿರಬೇಕಾದ ಎಲ್ಲಾ ಲಕ್ಷಣಗಳು ಇದರಲ್ಲಿದೆ. ಸಕಲ ವೇದ ಉಪನಿಷತ್‌ಗಳ ಸಾರ ಇದರಲ್ಲಿ ಅಡಗಿದೆ.