ಅರ್ಜುನನಿಗಿದ್ದ ತುಸು ಗರ್ವವನ್ನು ವಾಸುದೇವ ಕೃಷ್ಣ ಇಳಿಸಿದ್ಹೀಗೆ

Feb 24, 2021, 1:59 PM IST

ದ್ವಾರಕೆಯಲ್ಲಿ ವಿಪ್ರನೊಬ್ಬನಿಗೆ ಮಗು ಹುಟ್ಟುತ್ತದೆ. ಅದು ಸಾವನ್ನಪ್ಪುತ್ತಿದೆ. ಆಗ ಆ ಬ್ರಾಹ್ಮಣ ಮಗುವನ್ನು ತಂದು ರಾಜದ್ವಾರದ ಬಳಿ ಬರುತ್ತಾನೆ. ರಾಜನೇ ಪಾಪಿಷ್ಟ. ರಾಜ ಒಳ್ಳೆಯವನಾಗಿದ್ರೆ ನನ್ನ ಮಗು ಬದುಕ್ತಾ ಇತ್ತು. ಇದು ರಾಜನ ಪಾಪದ ಫಲ. ಅವನಿಗೆ ಪಾಪ ತಟ್ಟಲಿ ಎಂದುಕೊಳ್ಳುತ್ತಾನೆ. ಹೀಗೆ 9 ಮಕ್ಕಳು ಸಾವನ್ನಪ್ಪುತ್ತಾರೆ. ಅವುಗಳೆಲ್ಲವನೂ ರಾಜದ್ವಾರದ ಬಳಿ ಇಟ್ಟು ಬರುತ್ತಾನೆ. ಈ ದೃಶ್ಯವನ್ನು ನೋಡಿ ಅರ್ಜುನ ನೋಡಿ, ನಿಮ್ಮ ಮಕ್ಕಳನ್ನು ಬದುಕಿಸದಿದ್ರೆ ಅಗ್ನಿ ಪ್ರವೇಶ ಮಾಡುತ್ತೇನೆ ಎಂದು ಬ್ರಾಹ್ಮಣನಿಗೆ ಮಾತು ಕೊಡುತ್ತಾನೆ. ಮುಂದೇನಾಗುತ್ತದೆ.?