Jan 25, 2021, 11:28 AM IST
ನಮ್ಮ ಶರೀರದಲ್ಲಿ ರಾಕ್ಷಸರು ಬೇರೆ ಸ್ವರೂಪದಲ್ಲಿದ್ದಾರೆ. ಭಗವಂತ ವಾಸುದೇವ ಕೃಷ್ಣನ ಸ್ಮರಣೆಯಿಂದ ಸರ್ವಪಾಪಗಳು, ರಾಕ್ಷಸೀ ಮನೋಭಾವ ದೂರವಾಗುತ್ತದೆ. ಒಮ್ಮೆ ಗೋಪಾಲಕರನ್ನು, ಬಲರಾಮ ಕೃಷ್ಣನನ್ನು ರಾಕ್ಷಸ ನೋಡಿ, ಗೋವತ್ಸ ರೂಪ ತಾಳಿ, ಹಸುವಿನ ಗುಂಪನ್ನು ಸೇರಿಕೊಳ್ಳುತ್ತಾನೆ. ಅದು ಕೃಷ್ಣನಿಗೆ ಗೊತ್ತಾಗಿ, ಕರುವನ್ನು ಗಾಳಿಯಲ್ಲಿ ಜೋರಾಗಿ ತಿರುಗಿಸಿ, ದೂರದಲ್ಲಿದ್ದ ಬೇಲದ ಮರದ ಮೇಲೆ ಎಸೆಯುತ್ತಾನೆ. ರಾಕ್ಷಸ ಮೃತಪಡುತ್ತಾನೆ. ಗೋಪಾಲಕರು ಕೃಷ್ಣನಿಗೆ ಧನ್ಯವಾದಗಳನ್ನು ತಿಳಿಸುತ್ತಾರೆ. ದೇವತೆಗಳು ಪುಪ್ಟವೃಷ್ಟಿ ಸುರಿಸುತ್ತಾರೆ.