ಮಹಾಭಾರತ: ಗುರುಪತ್ನಿಯ ಆಜ್ಞೆ ಪಾಲಿಸಿದ ಉತ್ತಂಗ, ಮನೆಗೆ ಹೋಗಲು ಗುರುಗಳಿಂದ ಸಿಕ್ತು ಅನುಮತಿ

Aug 6, 2021, 4:53 PM IST

ಗುರು ಪತ್ನಿಯ ಅಜ್ಞೆಯಂತೆ ಉತ್ತಂಗ ಪವಿಷ್ಯ ರಾಣಿಯ ಕರ್ಣಾಭರಣಗಳನ್ನು ತೆಗೆದುಕೊಂಡು ಬರುವಾಗ ಭಿಕ್ಷುಕ ರೂಪದಲ್ಲಿದ್ದ ತಕ್ಷಕ ಅವುಗಳನ್ನು ತೆಗೆದುಕೊಂಡು ತನ್ನ ಲೋಕಕ್ಕೆ ಹೋಗುತ್ತಾನೆ. ಅವನನ್ನು ಹಿಂಬಾಲಿಸಿ ಉತ್ತಂಗ ನಾಗಲೋಕವನ್ನು ಪ್ರವೇಶಿಸುತ್ತಾನೆ.

ಅಲ್ಲಿ ಶೇಷನಾಗನ ಅನುಗ್ರಹದಿಂದ ಕರ್ಣಾಭರಣಗಳನ್ನು ವಾಪಸ್ ಪಡೆದು, ಗುರುಗಳ ಆಶ್ರಮದತ್ತ ಬರುತ್ತಾನೆ. ಕರ್ಣಾಭರಣಗಳನ್ನು ಗುರುಪತ್ನಿಗೆ ನೀಡುತ್ತಾರೆ. ದಾರಿಯಲ್ಲಿ ನಡೆದಿರುವುದನ್ನು ಗುರುಗಳಿಗೆ ತಿಳಿಸುತ್ತಾನೆ. ಅದರ ಅರ್ಥವನ್ನು ಗುರುಗಳು ವಿವರಿಸಿ, ಅವನಿಗೆ ಆಶೀರ್ವದಿಸಿ, ಗೃಹಸ್ಥಾಶ್ರಮದತ್ತ ಕಳುಹಿಸುತ್ತಾರೆ.