ಮಹಾಭಾರತದಲ್ಲಿ ಹೀಗೊಂದು ಕಥೆಯಿದೆ. ತಮ್ಮ ಮಾತನ್ನು ಶಿರಸಾ ಪಾಲಿಸಿದ ಶಿಷ್ಯ ಉಪಮನ್ಯುವನ್ನು ನೋಡಿ ಗುರುಗಳಿಗೆ ಮರುಕ ಉಂಟಾಯಿತು. ಶಿಷ್ಯನನ್ನು ಅನುಗ್ರಹಿಸಲಿ ಮುಂದಾಗುತ್ತಾರೆ. ಉಪಮನ್ಯು ಬಾವಿಯೊಳಗೆ ಯಾಕೆ ಬಿದ್ದಿ ಎಂದು ಕೇಳುತ್ತಾರೆ.
ಮಹಾಭಾರತದಲ್ಲಿ ಹೀಗೊಂದು ಕಥೆಯಿದೆ. ತಮ್ಮ ಮಾತನ್ನು ಶಿರಸಾ ಪಾಲಿಸಿದ ಶಿಷ್ಯ ಉಪಮನ್ಯುವನ್ನು ನೋಡಿ ಗುರುಗಳಿಗೆ ಮರುಕ ಉಂಟಾಯಿತು. ಶಿಷ್ಯನನ್ನು ಅನುಗ್ರಹಿಸಲಿ ಮುಂದಾಗುತ್ತಾರೆ. ಉಪಮನ್ಯು ಬಾವಿಯೊಳಗೆ ಯಾಕೆ ಬಿದ್ದಿ ಎಂದು ಕೇಳುತ್ತಾರೆ.
'ಗುರುಗಳೇ ಹಸಿವು ತಾಳಲಾರದೇ ಎಕ್ಕದ ಎಲೆಗಳನ್ನು ತಿಂದೆ ಪರಿಣಾಮವಾಗಿ ಕಣ್ಣಿನ ದೃಷ್ಟಿ ಹೋಯಿತು. ಹಾಗೆ ನಡೆದುಕೊಂಡು ಬರ್ತಾ ಬರ್ತಾ ಬಾವಿಯೊಳಗೆ ಬಿದ್ದು ಬಿಟ್ಟೆ ಎನ್ನುತ್ತಾನೆ. ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸು. ದೃಷ್ಟಿ ವಾಪಸ್ ಬರುವುದು ಎನ್ನುತ್ತಾರೆ. ಅದರಂತೆ ಉಪಮನ್ಯು, ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸುತ್ತಾನೆ. ಉಪಮನ್ಯುವಿನ ಗುರು ಭಕ್ತಿಯನ್ನು ನೋಡಿ, ಅಶ್ವಿನಿ ದೇವತೆಗಳು ಹರಸುತ್ತಾರೆ. ದೃಷ್ಟಿ ಮರಳಿ ಬರುತ್ತದೆ.