Jan 9, 2021, 1:09 PM IST
ರಾಕ್ಷಸರು, ದೇವತೆಗಳ ನಡುವೆ ಅಮೃತಕ್ಕಾಗಿ ಹೋರಾಟ ನಡೆಯುತ್ತದೆ. ಈ ಹೋರಾಟದಲ್ಲಿ ದೇವತೆಗಳಿಗೆ ಅಮೃತ ಸಿಗುತ್ತದೆ. ಸತ್ತು ಹೋದ ರಾಕ್ಷಸರನ್ನು ಶುಕ್ರಾಚಾರ್ಯರು ಬದುಕಿಸುತ್ತಾರೆ. ಬಲಿ ಚಕ್ರವರ್ತಿ ಸ್ವರ್ಗಕ್ಕೆ ಅಧಿಪತಿಯಾಗ್ತಾನೆ. ಇದನ್ನು ನೋಡಿ ದೇವಮಾತೆ ಅದಿತಿ ದೇವಿಗೆ ಬೇಸರವಾಗುತ್ತದೆ. ಶುಕ್ರಾಚಾರ್ಯರ ಬಲದಿಂದ ರಾಕ್ಷಸರಿಗೆ ಬಲವಾಗುತ್ತಿದೆಯಲ್ಲ ಅಂತ ಬೇಸರಪಟ್ಟುಕೊಳ್ಳುತ್ತಾರೆ. ಆಗ ಕಶ್ಯಪ ಮುನಿಗಳು ಅದಿತಿ ದೇವಿಗೆ ವ್ರತ ಮಾಡುವಂತೆ ಸೂಚಿಸುತ್ತಾರೆ. ಈ ವ್ರತವನ್ನು ಅದಿತಿ ದೇವಿ ಬಹಳ ನಿಷ್ಠೆಯಿಂದ ಮಾಡುತ್ತಾರೆ. ವ್ರತಕ್ಕೆ ಮೆಚ್ಚಿದ ಭಗವಂತ ಪ್ರತ್ಯಕ್ಷನಾಗಿ, ನಾನೇ ನಿನ್ನ ಮಗನಾಗಿ ಹುಟ್ಟುತ್ತೇನೆ ಎಂದು ವರ ನೀಡುತ್ತಾನೆ. ಮುಂದೆ ಬಲಿಚಕ್ರವರ್ತಿಯನ್ನು ವಾಮನ ಅವತಾರಿ ಭಗವಂತ ಸಂಹರಿಸುತ್ತಾನೆ.