Oct 6, 2021, 5:35 PM IST
ಇಂದು ಮಹಾಲಯ ಅಮಾವಾಸ್ಯೆ. ಪಿತೃಪಕ್ಷದ ಕೊನೆಯ ದಿನ. ಪಿತೃದೇವತೆಗಳ ಆರಾಧನೆಗೆ ಪ್ರಶಸ್ತ ಕಾಲ. ಮನುಷ್ಯನ ಸ್ವಭಾವ ಕೃತಜ್ಞತೆ ಸಲ್ಲಿಸುವುದು. ಯಾರಿಂದ ಉಪಕಾರ ಪಡೆದರೂ ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮನ್ನು ಈ ಭೂಮಿಗೆ ತಂದ ನಮ್ಮ ಪೂರ್ವಜರಿಗೂ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಅವರ ಅನುಗ್ರಹ ಇಡೀ ಕುಟುಂಬಕ್ಕೆ ಶ್ರೇಯಸ್ಕರ.