Jan 9, 2021, 5:02 PM IST
ಶ್ರೀರಾಮನು ಸೀತಾ, ಲಕ್ಷ್ಮಣರೊಂದಿಗೆ ವನವಾಸವನ್ನು ಮುಗಿಸಿಕೊಂಡು ವಾಪಸ್ಸಾಗುತ್ತಾನೆ. ಸಿಂಹಾಸನವನ್ನೇರಿ ರಾಮರಾಜ್ಯವನ್ನು ಸ್ಥಾಪನೆ ಮಾಡುತ್ತಾನೆ. ತಂದೆ ದಶರಥನಂತೆ ಪ್ರಜೆಗಳನ್ನು ನೋಡಿಕೊಳ್ಳುತ್ತಾನೆ. ರಾಮರಾಜ್ಯದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ರಾಮ- ಸೀತೆಯ ದಾಂಪತ್ಯ ಇಡೀ ಜಗತ್ತಿಗೆ ಮಾದರಿಯಾಗುತ್ತದೆ. ಹೀಗೆ ಭಾಗವತದಲ್ಲಿ ರಾಮ ಸೀತೆಯರ ಕಥೆ ಬರುತ್ತದೆ. ಇದನ್ನು ಕೇಳಿದರೆ ರಾಮಾಯಣ ಪಾರಾಯಣ ಮಾಡಿದಷ್ಟು ಪುಣ್ಯ ಲಭಿಸುತ್ತದೆ.