Nov 23, 2022, 10:10 AM IST
ಶನಿ ವಕ್ರಿಯಾಗಿದ್ದು, ಗುರುವೂ ವಕ್ರಿಯಾಗಿದ್ದು, ಕುಜನೂ ಕ್ರೂರವಾಗಿದ್ದ ಕಾರಣ ಕಳೆದ ಕೆಲ ಸಮಯದಿಂದ ಚಿತ್ರವಿಚಿತ್ರವಾದ ಹಾಗೂ ಅತ್ಯಂತ ಕ್ರೂರವಾದ ಕೊಲೆಪಾತಕಗಳಿಗೆ ಲೋಕ ಸಾಕ್ಷಿಯಾಯಿತು. ಜೊತೆಗೆ ಯುದ್ಧ, ಧರ್ಮದಂಗಲ್ ಎಲ್ಲವೂ ಹೆಚ್ಚಾಗಿತ್ತು. ಇದೀಗ ಗುರು ಹಾಗೂ ಶನಿ ಮಾರ್ಗಿಯಾಗಿದ್ದಾರೆ. ಕೇವಲ ಗುರುಬಲವಿದ್ದರೆ ಸಾಲದು, ಸರ್ವಗ್ರಹಗಳೂ ಮಾರ್ಗಿಯಾಗಿದ್ದಾಗ ಸಾಕಷ್ಟು ದೋಷಗಳು ಪರಿಹಾರವಾಗುತ್ತವೆ. ಈ ಸಮಯದಲ್ಲಿ ರಕ್ಷಣಾ ವಲಯದಲ್ಲಿರುವವರಿಗೆ ಶುಭಫಲ, ಜಾತಕದಲ್ಲಿ ಕುಜಬಲ ಉತ್ತಮ ಇರುವವರಿಗೆ ಜನವರಿಯೊಳಗೆ ಅತ್ಯುತ್ತಮ ವ್ಯಾವಹಾರಾದಿ ಉನ್ನತಿ, ಧನಲಾಭ ಹೆಚ್ಚಲಿದೆ. ಸಾಲಸೋಲಗಳು ಪರಿಹಾರವಾಗುತ್ತವೆ. ಇದರೊಂದಿಗೆ ಗುರುಬಲವೂ ಇದ್ದವರು ಅತ್ಯಂತ ಶುಭದಿನಗಳನ್ನು ನೋಡಲಿದ್ದಾರೆ ಎನ್ನುತ್ತಾರೆ ಪ್ರಾಜ್ಞರಾದ ಡಾ. ಹರೀಶ್ ಕಶ್ಯಪ್.