ನವರಾತ್ರಿ ಆರನೇ ದಿನ ಕಾತ್ಯಾಯನಿಯ ಉಪಾಸನೆ ಮಾಡಬೇಕು. ಯಾರು ಈ ಕಾತ್ಯಾಯನಿ? ಅವಳ ಹಿನ್ನೆಲೆ ಏನು? ಬ್ರಹ್ಮಾಂಡ ಗುರೂಜಿಗಳು ತಿಳಿಸಿಕೊಡುತ್ತಾರೆ.
ಕಾತ್ಯಾಯನಾಯ ವಿದ್ಮಹೇ
ಕನ್ಯಾಕುಮಾರಿ ಧೀಮಹೀ
ತನ್ನೋ ದುರ್ಗೀ ಪ್ರಚೋದಯಾತ್
ನವರಾತ್ರಿ ಆರನೇ ದಿನ ಕಾತ್ಯಾಯನಿಯ ಉಪಾಸನೆ. ಆಕೆ ಮೂಲಾಧಾರ ಚಕ್ರಕ್ಕೆ ಶಕ್ತಿ ನೀಡುವವಳು. ಆಕೆ ಮುಕ್ತಿದಾಯಿನಿ. ಈಕೆ ಕೇತು ದೋಷಕ್ಕೆ ಪರಿಹಾರ ಕೊಡುತ್ತಾಳೆ. ದಕ್ಷಿಣ ಭಾರತದಲ್ಲಿ ಈಕೆಯನ್ನು ಲಕ್ಷ್ಮೀ ಎನ್ನುತ್ತೇವೆ. ಆಕಾಶನೀಲಿ ಬಣ್ಣದ ಸೀರೆ ಇವಳಿಗೆ ಉಡಿಸಬೇಕು. ನೀವು ಕೂಡಾ ಅದೇ ಬಣ್ಣದ ಸೀರೆ ಉಟ್ಟು ಆಕೆಯ ಆರಾಧನೆ ಮಾಡಬಹುದು. ತೆಂಗಿನಕಾಯಿ ನೈವೇಧ್ಯ ಕೊಡಬೇಕು.