Jan 14, 2024, 8:13 PM IST
ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬವಾಗಿದ್ದು, ಇದನ್ನು ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ. ಪ್ರತಿಯೊಂದು ರಾಜ್ಯವು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಂತೆ ಹಬ್ಬವನ್ನು ಆಚರಿಸುತ್ತದೆ. ಸುಗ್ಗಿಯ ಕಾಲವನ್ನು ಭಾರತದಲ್ಲಿ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಹು ಮುಂತಾದ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತದ ಬಹುಪಾಲು ರಾಜ್ಯಗಳು ಸಂಕ್ರಾಂತಿಯನ್ನು ಆಚರಿಸುತ್ತವೆ. ಈ ವರ್ಷ ಜನವರಿ 15 ರಂದು ಸೋಮವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು. ಮಕರ ಸಂಕ್ರಾಂತಿ ವಿಶೇಷವಾದ ಕಾರ್ಯಕ್ರಮದಲ್ಲಿ ಹಬ್ಬದ ಆಚರಣೆ ಸಂಪ್ರದಾಯ ವಿವರಿಸುವುದರ ಜೊತೆಗೆ ಮಕರ ಸಂಕ್ರಾತಿಯ ರಾಶಿ ಫಲ ಹೇಗಿದೆ ಎಂಬುವುದನ್ನು ತಿಳಿಸಿದ್ದಾರೆ ದೈವಜ್ಞ ಹರೀಶ್ ಕಶ್ಯಪ.