Mahashivratri 2023: ಶಿವರಾತ್ರಿ ಹಬ್ಬವೇ ? ವ್ರತವೇ ? ತಪಸ್ಸಿದ್ಧಿಯೇ ?

Feb 15, 2023, 2:45 PM IST

ಭಕ್ತಿಯ ಪರಂಪರೆಗೆ ಶಿವನೇ ಮೂಲಾಧಾರ. ಆತನನ್ನು ತಲೆತಲಾಂತರದಿಂದಲೂ ಪೂಜಿಸಲಾಗುತ್ತಿದೆ. ವೈದಿಕವಾದ ಉಡುಗೆಗಳನ್ನು ಧರಿಸುವುದಿಲ್ಲ ಶಿವ. ಆತ ಕೇವಲ ಪ್ರಾಕೃತಿಕ ಉಡುಗೆಗಳನ್ನು ಧರಿಸುತ್ತಾನೆ. ವಿಷ್ಣುವಿಗೆ ಸಂಬಂಧಿಸಿದ ವ್ರತ ಏಕಾದಶಿಯಾದರೆ, ಶಿವನಿಗೆ ಸಂಬಂಧಿಸಿದ್ದು ಶಿವರಾತ್ರಿ. ಪ್ರತಿ ತಿಂಗಳ ಚತುರ್ದಶಿಯಂದು ಶಿವರಾತ್ರಿ ಬರುತ್ತದೆ. 12 ಶಿವರಾತ್ರಿಗಳನ್ನು ಆಚರಿಸಲಾಗುತ್ತದೆ. ಹಾಗಾಗಿ ಇದು ಹಬ್ಬವಲ್ಲ, ವ್ರತ. ವ್ರತಗಳು ಸಮಾಜಕ್ಕೆ ಭೋಗವನ್ನಲ್ಲ, ತ್ಯಾಗವನ್ನು ಕಲಿಸುತ್ತವೆ. ಆತ್ಮಕಲ್ಯಾಣಕ್ಕಾಗಿ ಶಿವರಾತ್ರಿ ಆಚರಣೆ ಮಾಡಬೇಕು. ಶಿವರಾತ್ರಿಯಂದು ಶಿವನನ್ನು ಪೂಜಿಸುವುದು ಹೇಗೆ ಎಂಬುದನ್ನು ದೈವಜ್ಞ ಡಾ. ಹರೀಶ್ ಕಶ್ಯಪ ತಿಳಿಸಿದ್ದಾರೆ.

MahaShivratri 2023ಯಂದೇ ಶನಿ ಪ್ರದೋಷ ವ್ರತ; ಶನಿ ದೋಷ ನಿವಾರಣೆಗೆ ಸುದಿನ