Sep 28, 2021, 4:47 PM IST
ದ್ರೌಪದಿ ಸ್ವಯಂವರದಲ್ಲಿಬಂದಿರುವ ರಾಜರೆಲ್ಲರಿಗೂ ಧನಸ್ಸನ್ನು ಎತ್ತಲಾಗಲಿಲ್ಲ. ಆಗ ಅರ್ಜುನ ಮೇಲೆದ್ದು, ಧನಸ್ಸನ್ನು ಎತ್ತಲು ಮುಂದೆ ಬರುತ್ತಾನೆ. ಸಲೀಸಾಗಿ ಎತ್ತಿ ದ್ರೌಪದಿಯನ್ನು ವರಿಸುತ್ತಾನೆ. ಅರ್ಜುನನ ಪರಾಕ್ರಮ ನೋಡಿ ವಾಸುದೇವ ಕೃಷ್ಣನಿಗೆ ಸಂತೋಷವಾಗುತ್ತದೆ. ಪಾಂಡವರು ಆಗ ವನವಾಸದಲ್ಲಿದ್ದರು. ಮಾರುವೇಷದಲ್ಲಿದ್ದರಿಂದ ಯಾರಿಗೂ ಅರ್ಜುನನ ಗುರುತು ಸಿಗಲಿಲ್ಲ. ಆದರೆ ಈತ ಕ್ಷತ್ರಿಯೋತ್ತಮನೇ ಇರಬೇಕು ಎಂಬ ಅನುಮಾನ ಬಂದಿತು.