ರುಕ್ಮಿಣಿ ಅಹಂಕಾರವನ್ನು ತಣಿಸಲು ಕೃಷ್ಣ ಮಾಡಿದ ಹಾಸ್ಯದ ಸಂಭಾಷಣೆ ಹೀಗಿದೆ ನೋಡಿ

Feb 14, 2021, 3:46 PM IST

ನರಕಾಸುರನ ಸಂಹಾರ ನಂತರ ಭೂಮಾತೆ ಕೃಷ್ಣನ ಬಳಿ ಬರುತ್ತಾಳೆ. ನರಕನ ಅರಮನೆಯಲ್ಲಿರುವ ಗೋಪಿಕೆಯರನ್ನು ಬಿಡುಗಡೆಗೊಳಿಸಲು ಪ್ರಾರ್ಥಿಸುತ್ತಾಳೆ. ಅದರಂತೆ ಕೃಷ್ಣ, ಗೋಪಿಕೆಯನ್ನು ಬಿಡಿಸಿ ತಾನೇ ಮದುವೆಯಾಗುತ್ತಾನೆ. ನಂತರ ಸತ್ಯಭಾಮೆ ಜೊತೆ ದೇವಲೋಕಕ್ಕೆ ಹೋಗುತ್ತಾನೆ. ಸತ್ಯಭಾಮೆ ಕೋರಿಕೆ ಮೇರೆಗೆ ಕೃಷ್ಣ, ಪಾರಿಜಾತ ವೃಕ್ಷವನ್ನು ಗರುಡನ ಮೇಲಿಟ್ಟು ದ್ವಾರಕೆಗೆ ತರಲು ಮುಂದಾಗುತ್ತಾನೆ. ಇದಕ್ಕೆ ಇಂದ್ರ ಒಪ್ಪುವುದಿಲ್ಲ. ಆಗ ಕೃಷ್ಣ ಯುದ್ದ ಮಾಡಿ ಪಾರಿಜಾತ ವೃಕ್ಷವನ್ನು ತರುತ್ತಾನೆ. ಮುಂದೆ ಒಂದು ದಿನ ರುಕ್ಮಿಣಿ ಜೊತೆ ಸಲ್ಲಾಪದಲ್ಲಿ ತೊಡಗಿರುತ್ತಾನೆ. ಆಗ ರುಕ್ಮಿಣಿಯ ಅಹಂಕಾರವನ್ನು ತಣಿಸಲು ತಿಳಿ ಹಾಸ್ಯ ಮಾಡುತ್ತಾನೆ.