ಗುರು ರಾಶಿ ಪರಿವರ್ತನೆ; ತರಲಿದೆ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆ

Apr 12, 2022, 3:00 PM IST

ಯಾವುದೇ ವರ್ಷದ ಯಾವುದೇ ತಿಂಗಳಿಗಿಂತ ಈ ತಿಂಗಳು ಬಹಳ ವಿಶೇಷವಾಗಿದೆ. ಇದಕ್ಕೆ ಕಾರಣ ಈ ಚೈತ್ರ ಮಾಸದಲ್ಲಿಯೇ ಎಲ್ಲ 9 ಗ್ರಹಗಳು ಸ್ಥಾನ ಬದಲಾವಣೆ(Planet transition) ಮಾಡುತ್ತಿರುವುದು. ಹಾಗಾಗಿ ಇದು ಅಪರೂಪದ ಯೋಗಗಳಿರುವ ಮಾಸ. 

ಇದೇ ಏಪ್ರಿಲ್ 13ರಂದು ಗುರು(Jupiter)ವು ಕುಂಭದಿಂದ ತನ್ನ ಸ್ವಕ್ಷೇತ್ರವಾದ ಮೀನ(Pisces) ರಾಶಿಗೆ ಹೋಗುತ್ತಿದ್ದಾನೆ. ಗೌರವ, ಹೆಸರು, ಖ್ಯಾತಿ ಕೊಡುವ ಗುರುವು 12 ವರ್ಷಗಳ ನಂತರ ಸ್ವರಾಶಿಗೆ ಹೋಗುತ್ತಿದ್ದಾನೆ. ಈತ ಬಹಳ ಒಳ್ಳೆಯ ಗ್ರಹ. ಈತನ ಅನುಗ್ರಹ ಇದ್ದಾಗ ಮಾತ್ರ ಲೋಕದಲ್ಲಿ ಸಮೃದ್ಧಿ, ಶಾಂತಿ, ಸಹಬಾಳ್ವೆ ಸಾಧ್ಯವಾಗುತ್ತದೆ. ಗುರುವಿನ ಈ ಸ್ಥಾನಪಲ್ಲಟವು ಜಗತ್ತು ಹಾಗೂ ದೇಶದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಗುರುದೆಸೆಯಿಂದ ಕೊರೋನಾ ಹಾವಳಿ ತಗ್ಗುತ್ತದೆ. ವ್ಯಾಪಾರ, ಕೃಷಿಯಲ್ಲಿ ಅಭಿವೃದ್ಧಿಯಾಗಲಿದೆ. ಪಾಪ ಕಾರ್ಯ ದೂರವಾಗಿ ಜನರಿಗೆ ಶಾಂತಿ ದೊರೆಯಲಿದೆ ಸೇರಿದಂತೆ ಇನ್ನೂ ಹಲವು ಉತ್ತಮ ಫಲಗಳಿರುವುದನ್ನು ದೈವಜ್ಞ ಡಾ. ಹರೀಶ್ ಕಶ್ಯಪ ತಿಳಿಸಿಕೊಟ್ಟಿದ್ದಾರೆ. 

Panchanga: ರಾಹು-ಕೇತುಗಳ ಸ್ಥಾನಪಲ್ಲಟದಿಂದ ದ್ವಾದಶ ರಾಶಿಗಳ ಮೇಲೆ ಯಾವೆಲ್ಲಾ ಫಲಗಳಿವೆ..?

ಈ ಗುರು ಗ್ರಹ ಗೋಚಾರದ ಫಲ ಭಾರತ ಮತ್ತು ಜಗತ್ತಿನ ಮೇಲೆ ಏನಿರಲಿದೆ ನೋಡೋಣ.