Feb 26, 2021, 1:36 PM IST
ಮಾನವ ಜನ್ಮ, ಇಲ್ಲಿನ ಲೌಕಿಕ ಬದುಕಿನ ಬಗ್ಗೆ ಭಾಗವತದಲ್ಲಿ ಬಹಳ ಅರ್ಥಪೂರ್ಣವಾಗಿ ಹೇಳಲಾಗಿದೆ. ನಾನು, ನನ್ನದು, ಇದು ನನ್ನದು, ಅದು ನನ್ನದು ಎಂದು ವ್ಯಾಮೋಹ ಪಡುತ್ತೇವೆ. ಇದು ಶಾಶ್ವತ ಅಲ್ಲ. ಒಂದು ದಿನ ಹುಟ್ಟು, ಒಂದು ದಿನ ಬದುಕು, ಒಂದು ದಿನ ಸಾವು. ಇವುಗಳ ನಡುವೆ ಇದ್ದಷ್ಟು ದಿನ ಸಂತೋಷವಾಗಿ ಬದುಕಬೇಕು ಎನ್ನುವುದು ಭಾಗವತದ ಸಾರ. ನಮ್ಮ ದೇಹ ದೂರವಾಗಬಹುದು, ಆತ್ಮ ಶಾಶ್ವತವಾದದ್ದು ಎಂದು ಶುಕ ಮಹರ್ಷಿಗಳು, ಪರೀಕ್ಷಿತನಿಗೆ ಹೇಳುತ್ತಾ ಹೋಗುತ್ತಾರೆ. ತ್ರಿಗುಣಾತೀತನಾದ ಭಗವಂತನಿಗೆ ನಮಸ್ಕರಿಸುತ್ತಿದ್ದಾರೆ.