Sep 9, 2021, 3:01 PM IST
ಇಂದು ಸ್ವರ್ಣಗೌರಿ ವ್ರತ. ತಾಯಿ ಗೌರಿ ಮಾತೆ ಪಾರ್ವತಿ ದೇವಿಯ ಅವತಾರ ಎನ್ನುತ್ತಾರೆ. ಉಪವಾಸವನ್ನು ಆಚರಿಸುವ ಮೂಲಕ ವಿವಾಹಿತ ಮಹಿಳೆಯರು ವ್ರತ ಆಚರಿಸುವುದರಿಂದ ಪತಿಯ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ತುಂಬಿದ ಸಭೆಯಲ್ಲಿ ಈಶ್ವರ ತನ್ನ ವರ್ಣದ ಬಗ್ಗೆ ಹಗುರವಾಗಿ ಮಾತನಾಡುತ್ತಾನೆ.
ಇಂದು ಸ್ವರ್ಣಗೌರಿ ವ್ರತ, ಅಚರಣೆ ಹೇಗೆ..? ಮಹತ್ವವೇನು.? ಇಲ್ಲಿ ತಿಳಿಯಿರಿ
ಇದರಿಂದ ಅವಮಾನಿತಳಾದ ದೇವಿ ಯಜ್ಞಕುಂಡಕ್ಕೆ ಹಾರುತ್ತಾಳೆ. ನಂತರ ಸಾವಿರಾರು ವರ್ಷಗಳ ಕಾಲ ಈಶ್ವರ ತಪಸ್ಸು ಮಾಡಿ ಪಾರ್ವತಿಯನ್ನು ಸತಿಯನ್ನಾಗಿ ಪಡೆಯುತ್ತಾನೆ. ಆ ನಂತರ ಆಕೆ ಸ್ವರ್ಣ ಬಣ್ಣವನ್ನು ಪಡೆಯುತ್ತಾಳೆ. ಹಾಗಾಗಿ ಆಕೆಯನ್ನು ಸ್ವರ್ಣಗೌರಿ ಎನ್ನುತ್ತಾರೆ. ಇನ್ನು ಗೌರಿವ್ರತದಲ್ಲಿ ಬಾಗಿನ ಕೊಡುವ ಸಂಪ್ರದಾಯವಿದೆ. ಇದರ ಮಹತ್ವವೇನು..? ಇದರ ಹಿನ್ನಲೆಯೇನು..? ಎಂಬುದನ್ನು ಬ್ರಹ್ಮಾಂಡ ಗುರೂಜಿ ವಿವರಿಸಿದ್ದಾರೆ.