Aug 3, 2020, 12:55 PM IST
ನಿತ್ಯ ದಾರಿದ್ರ್ಯ ಇರುವವನು, ಸರ್ವರೋಗಗಳಿಂದ ಪೀಡಿಸಲ್ಪಡುವವನು, ಪರಮ ಮೂರ್ಖನು, ನಿರಂತರವಾಗಿ ಬೇರೆ ಬೇರೆ ದೇಶಗಳಲ್ಲಿ ಸುಖಾ ಸುಮ್ಮನೆ ಸಂಚರಿಸುವವನು, ಎಲ್ಲಾ ಸಮಯದಲ್ಲಿ ಇತರರಿಗೆ ಸೇವೆ ಮಾಡುವವನು, ಅವನಿಗೆ ನೆಮ್ಮದಿ ಇಲ್ಲದವನು ಭೂಮಿ ಮೇಲೆಯೂ ಇದ್ದೂ ಪ್ರಯೋಜನವಿಲ್ಲ ಎಂದು ಶ್ಲೋಕದ ಮೂಲಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವರಿಸಿದ್ದಾರೆ. ದುಡಿಯುವ ಶಕ್ತಿಯಿದ್ದೂ ಸೋಮಾರಿಯಾಗಿ ಮನೆಯಲ್ಲಿದ್ದು ದರಿದ್ರನಂತೆ ಇರುವವನಿಗೆ ಯಾರೂ ಗೌರವಕೊಡುವುದಿಲ್ಲ. ಬೆಲೆ ಕೊಡುವುದಿಲ್ಲ. ಎಲ್ಲರೂ ಅಗೌರವದಿಂದ ನೋಡುತ್ತಾರೆ. ಹಾಗಾಗಿ ನಾವು ಕಷ್ಟಪಟ್ಟು ಸ್ವಾಭಿಮಾನದಿಂದ ಬದುಕಬೇಕು ಎಂಬುದನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.
ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಂದು ಕಲೆ.!