ಕಪ್ಪೆ, ಕತ್ತೆ, ಗೊಂಬೆಗಳ ಮದುವೆ, ಇನ್ನಾದ್ರೂ ಬರುತ್ತಾ ಮಳೆ?

Jun 14, 2023, 12:46 PM IST

ರಾಜ್ಯದಲ್ಲಿ ಇನ್ನೂ ಮುಂಗಾರು ಪ್ರವೇಶವಾಗಿಲ್ಲ. ಕೆಲವೆಡೆ ನೀರಿನ ಸಮಸ್ಯೆ ಉಂಟಾಗಿದೆ, ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕುರಿತು ನಿರ್ಧಾರಕ್ಕೆ ಮುಂದಾಗಿದೆ. ಉತ್ತರ ಕರ್ನಾಟಕದಲ್ಲಿ ಇದೀಗಾಗಲೇ ಬರಗಾಲದ ಮುನ್ಸೂಚನೆ ಸಿಗುತ್ತಿದ್ದಂತೆ, ಜನರು ವಿಶೇಷ ಆಚರಣೆಗೆ ಮುಂದಾಗಿದ್ದಾರೆ. ಮಳೆಗಾಗಿ ಕೆಲ ಗ್ರಾಮಸ್ಥರು ಕಪ್ಪೆಗಳಿಗೆ ಅರಿಶಿಣ ಬಳಿದು ಮದುವೆ ಮಾಡಿ ಮೆರವಣಿಗೆ ಮಾಡಿದ್ರೆ, ಇನ್ನೂ ಕೆಲವೆಡೆ ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿದ್ದಾರೆ. ಸಾಲ್ದೂ ಅಂತ ಉತ್ತರ ಕರ್ನಾಟಕದಲ್ಲಿ ಮಳೆರಾಯನಿಗಾಗಿ ಗೊಂಬೆಗಳಿಗೆ ಮದುವೆ ಮಾಡಿದ್ದಾರೆ. ಅಲ್ದೆ ರೈತರು ವಿಶೇಷ ಪೂಜೆ ಮಾಡಿ ಕಂಬಳಿ ಬೀಸಿ ಮಳೆರಾಯನನ್ನು ಕರೆದಿದ್ದಾರೆ. ಈ ಎಲ್ಲದರ ಮಧ್ಯೆ ಮಳೆಗಾಗಿ ಕಾವೇರಿಯಲ್ಲಿ ಪರ್ಜನ್ಯ ಜಪ, ಹೋಮ ಹವನ ನಡೆಸಲಾಗಿದೆ. ಹಾಗಾದ್ರೆ ಮಳೆರಾಯನಿಗಾಗಿ ಜನ ಏನೆಲ್ಲಾ ಮಾಡ್ತಿದ್ದಾರೆ ಅನ್ನೋದರ ವಿಶೇಷ ವರದಿ ಇಲ್ಲಿದೆ ನೋಡಿ..

ಕಷ್ಟದ ಮೇಲೆ ಕಷ್ಟ ಬರಲಿ, ಗೆದ್ದೇಗೆಲ್ತೀವಿ ಅನ್ನೋ ಛಲದಂಕ ಮಲ್ಲರು ಈ ರಾಶಿಯವ್ರು; ಅವರಿಗೆ ಗೆಲುವು ಶತಸಿದ್ಧ