Jul 18, 2020, 12:27 PM IST
ಕಾಗೆ ಬಣ್ಣ ಕಪ್ಪು. ಅದೇ ರೀತಿ ಕೋಗಿಲೆ ಕೂಡಾ ಕಪ್ಪು. ಆದರೆ ಕಾಗೆಗೂ, ಕೋಗಿಲೆಗೂ ವ್ಯತ್ಯಾಸ ಇದೆ. ವಸಂತ ಕಾಲ ಬಂದಾಗ ಕೋಗಿಲೆ ಮಧುರವಾಗಿ ಕೂಗುತ್ತದೆ. ಕಾಗೆ ಕರ್ಕಶವಾಗಿ ಕೂಗುತ್ತದೆ. ಅದೇ ರೀತಿ ಪಂಡಿತನೂ, ಪಾಮರನೂ ನೋಡುವುದಕ್ಕೆ ಒಂದೇ ರೀತಿ ಕಂಡರೂ ಮಾತು ಪ್ರಾರಂಭಿಸಿದ ಮೇಲೆ ಪಂಡಿತನೂ ಪಂಡಿತನೇ, ಮೂರ್ಖನು ಮೂರ್ಖನೇ. ಹಾಗೆಯೇ ಬಣ್ಣ, ರೂಪ, ಆಕಾರವನ್ನು ನೋಡಿ ಯಾರನ್ನೂ ನಿರ್ಧರಿಸಲಾಗುವುದಿಲ್ಲ ಎಂದು ತಾತ್ಪರ್ಯ. ಇದರ ಬಗ್ಗೆ ಉದಾಹರಣೆ ಮೂಲಕ ಅರ್ಥಪೂರ್ಣವಾಗಿ ಗಣಪತಿ ಸಚ್ಚಿದಾನಂದ ಗುರೂಜಿ ಹೇಳಿದ್ದಾರೆ ಕೇಳಿ.