Jul 18, 2020, 6:27 PM IST
ಸಮುದ್ರದ ಮೇಲೆ ಬೀಳುವ ಅತಿಯಾದ ಮಳೆ ನೀರು ವ್ಯರ್ಥ. ಹೊಟ್ಟೆ ತುಂಬಿದ ಮನುಷ್ಯನಿಗೆ ಕರೆದು ಊಟ ಹಾಕುವುದು ವ್ಯರ್ಥ. ಅದೇ ರೀತಿ ಧನ, ಧಾನ್ಯ, ಸಂಪತ್ತು ಇರುವವನಿಗೆ ದಾನ ಕೊಡುವುದು ವ್ಯರ್ಥ. ಕತ್ತಲನ್ನು ಓಡಿಸುವ ದೀಪ ಹಗಲಿನ ಸಮಯದಲ್ಲಿ ವ್ಯರ್ಥವಾಗುತ್ತದೆ. ವ್ಯರ್ಥವಾಗುವ ಕೆಲಸವನ್ನು ನಾವು ಮಾಡಬಾರದು. ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಕೆಲಸ ಮಾಡಬೇಕು. ಬದುಕಬೇಕು. ಅದೇ ರೀತಿ ದಾನವನ್ನೂ ಸಹ ಪಾತ್ರರಿಗೆ ಮಾಡಬೇಕೇ ವಿನಃ ಅಪಾತ್ರರಿಗೆ ಮಾಡಬಾರದು. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿ.