Ukraine Russia Crisis: ಯುದ್ಧದ ಬಗ್ಗೆ ಎರಡು ವರ್ಷ ಮುಂಚೆಯೇ ಹೇಳಿದ್ರಾ ಕೋಡಿಶ್ರೀ?

Feb 26, 2022, 1:01 PM IST

ರಷ್ಯಾ- ಉಕ್ರೇನ್ ಮಹಾಸಮರ(Ukraine Russia Crisis)ಕ್ಕೆ ಜಗತ್ತು ಕಂಗಾಲಾಗಿದೆ. ಎಲ್ಲೋ ನಡೆವ ಯುದ್ಧ ಎಂದು ಸುಮ್ಮನಿರುವಂತಿಲ್ಲ. ಯುದ್ಧದ ಪರಿಣಾಮಗಳ ವ್ಯಾಪ್ತಿ ಇಡೀ ಜಗತ್ತನ್ನು ಒಳಗೊಂಡಿರುತ್ತದೆ. ಉಕ್ರೇನ್ ನ್ಯಾಟೋ(Nato) ಜೊತೆ ಗುರುತಿಸಿಕೊಳ್ಳೋ ಸುಳಿವು ಸಿಕ್ಕಿದ್ದಕ್ಕೆ ರಷ್ಯಾ ಈ ಅವಾಂತರ ಮಾಡುತ್ತಿದೆ ಅನ್ನೋದು ಕೆಲವರ ವಾದ. ರಷ್ಯಾಗೆ ಇನ್ನಷ್ಟು ರಾಜಕೀಯ ಕಾರಣಗಳಿರಬಹುದು. ಆದರೆ, ಅದಕ್ಕಿಂತ ಮುಂಚೆ ಈ ಯುದ್ಧದ ಸೂಚನೆ ಹಿಂದೂ ಪಂಚಾಂಗದಲ್ಲಿತ್ತು ಎಂಬುದನ್ನು ಕೇಳಿದರೆ ಆಶ್ಚರ್ಯ ಪಡುತ್ತೀರಿ. ಅದರಲ್ಲೂ ಕೋಡಿ ಮಠ(Kodi Mutt)ದ ಶಿವಾನಂದ ರಾಜೇಂದ್ರ ಸ್ವಾಮೀಜಿಗಳು 2020ರಲ್ಲೇ ಈ ಬಗ್ಗೆ ಹೇಳಿದ್ರು!

ಹೌದು, ಒಂದಿಡೀ ದೇಶವೇ ವಿಶ್ವ ಭೂಪಟದಿಂದ ಮರೆಯಾಗುತ್ತದೆ ಎಂದು 2020ರಲ್ಲೇ ಕೋಡಿಶ್ರೀ ಹೇಳಿದ್ದರು. ಆಗ ಆ ಮಾತನ್ನು ಬಹುತೇಕರು ಅಫ್ಘಾನಿಸ್ತಾನ(Afghanistan)ಕ್ಕೆ ಅನ್ವಯಿಸಿ ಹೇಳಿರಬಹುದು ಎಂದು ಊಹಿಸಿದ್ದರು. ಆದರೆ, ಆಗ ಯುದ್ಧ ನಡೆದಿರಲಿಲ್ಲ. ಹೀಗಾಗಿ, ಕೋಡಿಶ್ರೀ ಹೇಳಿದ್ದು ಉಕ್ರೇನ್- ರಷ್ಯಾ ಯುದ್ಧದ ನಂತರದ ಪರಿಣಾಮಗಳ ಬಗ್ಗೆ ಎನ್ನಲಾಗುತ್ತಿದೆ.

Ukraine Russia Crisis: ಉಕ್ರೇನ್- ರಷ್ಯಾ ಯುದ್ಧದ ಬಗ್ಗೆ ಮೊದಲೇ ಹೇಳಿದ್ದ ನಾಸ್ಟ್ರಾಡಾಮಸ್!

ಇದಲ್ಲದೆ, ಹಿಂದೂ ಪಂಚಾಂಗಗಳ ಪ್ರಕಾರ ಕೂಡಾ ಜಗತ್ತಿನ ಭವಿಷ್ಯ ನಿರ್ಧರಿಸುವುದು ಗ್ರಹಗಳು. ಶತ್ರು ಗ್ರಹಗಳು ಪರಸ್ಪರ ಸೇರಿದರೆ ಭೂಮಿ ಮೇಲೆ ಅದರ ಪ್ರಭಾವವಾಗಿ ಯುದ್ಧ, ಪ್ರವಾಹ ಮುಂತಾಗಿ ಕಾಣಿಸಿಕೊಳ್ಳುತ್ತದೆ. ಕುಜ ಹಾಗೂ ಶನಿ ಉಗ್ರ ಗ್ರಹಗಳು. ಇವೆರಡೂ ಗ್ರಹಗಳು ಒಂದೆಡೆ ಸೇರಿದಾಗ ಅಲ್ಲೋಲಕಲ್ಲೋಲವಾಗುವುದು ಹಿಂದಿಂದಲೂ ಕಂಡುಬಂದಿದೆ. ಇದನ್ನೇ ವರಾಹಮಿಹಿರ(Varaha Mihira)ರು ಬೃಹತ್ ಸಂಹಿತೆಯಲ್ಲಿ ಹೇಳಿದ್ದಾರೆ. ಈ ವರ್ಷಾರಂಭದಲ್ಲೇ ಒಂಟಿಕೊಪ್ಪಲ್ ಪಂಚಾಂಗ ಶ್ರವಣ ಸಂದರ್ಭದಲ್ಲಿ ಜಗತ್ತು ಯುದ್ಧಭೀತಿಯಿಂದ ನಲುಗುತ್ತದೆ ಎಂದು ಹೇಳಲಾಗಿತ್ತು. ಅದಲ್ಲದೆ, ಕುಂಭ ರಾಶಿಯಲ್ಲಿ ಗುರುವಿನ ಸಂಚಾರದಿಂದ ಯುದ್ಧಭೀತಿಗಳೆದ್ದರೂ ಕೆಲ ಸಮಯದ ನಂತರ ಅದೆಲ್ಲ ತಣ್ಣಗಾಗಿ ದೇಶ ದೇಶಗಳ ನಡುವೆ ಸ್ನೇಹ ಸಮೃದ್ಧಿ ಏರ್ಪಡುತ್ತದೆ ಎನ್ನಲಾಗಿದೆ. ಈ ಸಂಬಂಧ ವಿಸ್ತೃತ ವಿಡಿಯೋ ವಿವರಣೆ ಇಲ್ಲಿದೆ.