Jun 11, 2022, 12:12 PM IST
ಕನ್ಯಾ ರಾಶಿಯದು ಭೂಮಿ ತತ್ವ. ಇವರನ್ನಾಳುವ ಗ್ರಹ ಬುಧ. ಈ ಕಾರಣದಿಂದ ಇವರು ಭೂಮಿಯಂಥ ತಾಳ್ಮೆಯನ್ನು ಹೊಂದಿರುತ್ತಾರೆ. ಹಾಗೆಯೇ ಬುಧನ ಅನುಗ್ರಹದಿಂದ ಬಹಳ ಬುದ್ಧಿವಂತರಾಗಿರುತ್ತಾರೆ.
ವೃಷಭದಿಂದ ಸಿಂಹದವರೆಗೆ ಈ ನಾಲ್ಕು ರಾಶಿಗಳು ಬೆಸ್ಟ್ ಪೇರೆಂಟ್ಸ್
ಕನ್ಯಾ ರಾಶಿಗೆ ಧನಸ್ಥಾನವು ತುಲಾ ರಾಶಿಯಾಗಿದೆ. ತುಲಾ ರಾಶಿಯ ಅಧಿಪತಿ ಶುಕ್ರನಾಗಿದ್ದಾನೆ. ಈತ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದಾಗ ಧನ ಯೋಗದ ಜೊತೆಗೆ, ಸ್ವಂತ ಬಲದಿಂದ ಮೇಲೆ ಬರಲು ಸಾಧ್ಯವಾಗುತ್ತದೆ. ಹೀಗೆ ಕನ್ಯಾ ರಾಶಿಗೆ ಧನಲಾಭವಾಗಲು ಜಾತಕದಲ್ಲಿ ಶುಕ್ರ ಎಲ್ಲಿರಬೇಕು, ಕನ್ಯಾ ರಾಶಿಯವರು ಧನಲಾಭಕ್ಕಾಗಿ ಮಾಡಬೇಕಾದ ಪರಿಹಾರ ಕಾರ್ಯಗಳೇನು? ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.