ಮಲೆನಾಡಲ್ಲಿ ಮಹಾ ಕುಂಭಾಭಿಷೇಕ್ಕೆ ಭರದ ಸಿದ್ಧತೆ; ಭವ್ಯತೆಗೆ ಬೆರಗಾದ ಭಕ್ತರು

ಮಲೆನಾಡಲ್ಲಿ ಮಹಾ ಕುಂಭಾಭಿಷೇಕ್ಕೆ ಭರದ ಸಿದ್ಧತೆ; ಭವ್ಯತೆಗೆ ಬೆರಗಾದ ಭಕ್ತರು

Published : Apr 14, 2022, 10:13 AM IST

ಐತಿಹಾಸಿಕ ಕುಂಭಾಭಿಷೇಕಕ್ಕೆ ಮಲೆನಾಡು ಸಾಕ್ಷಿ ಆಗುತ್ತಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಹಾ ಕುಂಭಾಭಿಷೇಕ ನೆರವೇರಿಸಲು ಸಿದ್ದತೆಗಳು ಪೂರ್ಣಗೊಂಡಿದೆ. ತುಂಗಾನದಿ ತಟದಲ್ಲಿ ಭವ್ಯವಾಗಿ ಎದ್ದುನಿಂತಿರುವ ಲಕ್ಷ್ಮಿನೃಸಿಂಹ ದೇವಾಲಯದ ಕುಂಭಾಷೇಕಕ್ಕೆ ಸಿದ್ದತೆ ಹೇಗಿದೆ ಗೊತ್ತಾ ..ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ 

ಆಲ್ದೂರು ಕಿರಣ್, ಚಿಕ್ಕಮಗಳೂರು, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(Chikmagaluru) ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ(hariharapura)ದಲ್ಲಿರುವ ಶ್ರೀ ಮಠವು ಧರ್ಮಪ್ರಸಾರದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಜ್ಞಾನಾರ್ಜನೆಯ ಸಲುವಾಗಿ ಹಲವಾರು ರೀತಿಯ ಕಾಯಕಗಳನ್ನು ಮಾಡುತ್ತಾ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಶ್ರೀ ಮಠದಲ್ಲಿ ಈ ಹಿಂದಿನಿಂದಲೂ ಶ್ರೇಷ್ಠವಾದ ಗುರುಪರಂಪರೆಯಿದ್ದು, ಪ್ರಸ್ತುತ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ  ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ(Swayamprakasha Sachchcidananda Saraswati Swamiji)ಗಳ ಸಂಕಲ್ಪದಿಂದ ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ನಡೆದ ದೇವಾಲಯ(Temple)ಗಳ ಪುನರ್ ನಿರ್ಮಾಣ ಕಾರ್ಯವು ಇದೀಗ ಸಂಪನ್ನಗೊಂಡಿದೆ. ಇದೀಗ ದೇವಾಲಯಗಳ ಪುನಃ ಪ್ರತಿಷ್ಠಾ ಮಹಾಕುಂಭಾಭಿಷೇಕ ಮಹೋತ್ಸವ(Mahakumbhabhisheka)ದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 10 ರಿಂದ ಏಪ್ರಿಲ್ 24 ರ ವರೆಗೆ ಆಯೋಜನೆಗೊಂಡಿದೆ.ಇದೇ ತಿಂಗಳು  15ರಂದು ಶ್ರೀಗಳು ಶಾರದಾ ದೇವಿಗೆ ಮಹಾ ಕುಂಭಾಭಿಷೇಕವನ್ನು ಮಾಡಲಿದ್ದಾರೆ. 

ಈಗಾಗಲೇ ಹರಿಹರಪುರ ಮಠದ ಮಾರ್ಗ ಸೇರಿದಂತೆ ಇಡೀ ಪಟ್ಟಣವನ್ನು ಅಲಂಕೃತಗೊಳಿಸಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಮಠದ ಪ್ರವೇಶದ್ವಾರದಲ್ಲಿ ಸ್ವಯಂಸೇವಕರು ಭಕ್ತರ ಪಾದಗಳನ್ನು ತೊಳೆದು ಸ್ವಾಗತ ಮಾಡುತ್ತಿದ್ದಾರೆ. ಮಠದ ಒಳಗೆ ಗಜ ಅಶ್ವಗಳು ಸಾಕ್ಷಿ ಆಗಿವೆ. ಮಠದಲ್ಲಿ ಯಾಗ ಶಾಲೆಯಲ್ಲಿ  ಧಾರ್ಮಿಕ ಕಾರ್ಯಕ್ರಮಗಳು ನಿನ್ನೆಯಿಂದಲೇ ಆರಂಭವಾಗಿದ್ದು ಇದೇ ತಿಂಗಳು 24 ರವರೆಗೂ ನಿತ್ಯವೂ ಹೋಮ ಹವನಗಳು ನಡೆಯುಲಿದೆ. ಕೋಟಿ ಕುಂಕುಮಾರ್ಚನೆ, ಕೋಟಿ ತುಳಿಸಿ ಆರ್ಚನೆ, ಧನ್ವಂತರೀ ಮಹಾಯೋಗ, ಸಹಸ್ರ ಚಂಡಿಕಾಮಹಾಯೋಗ ನಡೆಯುಲಿದೆ. ಮಠಕ್ಕೆ ಭಕ್ತರಿಂದ  ಹೊರಕಾಣಿಗೆ ರೂಪದಲ್ಲಿ ಅಕ್ಕಿ, ತರಿಕಾರಿ, ಅಡಿಕೆ, ತೆಂಗಿನ ಕಾಯಿ, ಬಾಳೆಹಣ್ಣು, ಬಟ್ಟೆ ಸೇರಿದಂತೆ  ದಿನಸಿ ವಸ್ತುಗಳು ಬಂದಿವೆ. ಈ ಮಹಾ ಕುಂಭಾಭಿಷೇಕದಲ್ಲಿ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ. ಧಾರ್ಮಿಕಕಾರ್ಯಕ್ರಮಗಳ ಜೊತೆಗೆ ಸಾಂಸ್ಕ್ರತಿಕ ಕಾರ್ಯವೂ ನಡೆಯುತ್ತಿದೆ. 

ಹರಿಹರಪುರದಲ್ಲಿ ಮಹಾಕುಂಭಾಭಿಷೇಕ ವೈಭವ

ಅಗಸ್ತ್ಯ ಮಹರ್ಷಿಗಳು ತಪಸ್ಸು ಮಾಡಿರುವ ಜಾಗದಲ್ಲಿ ಭವ್ಯವಾದ ದೇವಾಲಯ ನಿರ್ಮಾಣಗೊಂಡಿದೆ.ಐತಿಹಾಸಿಕ ಮಹಾಕುಂಭಾಭಿಷೇಕಕ್ಕೆ ಕ್ಷಣಕ್ಷಣಗಣನೆ ಆರಂಭವಾಗಿದ್ದು, ಹೊರನಾಡಿನ ಅನ್ನಪೂಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಷಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮಲೆನಾಡಿನ ಹತ್ತು ತಾಲೂಕಿನ ಎಲ್ಲ ಸಮುದಾಯದ ಸುಮಾರು ಎರಡು ಲಕ್ಷ ಮನೆಗಳಿಗೆ ಅಕ್ಷತೆಯೊಂದಿಗೆ ಆಹ್ವಾನ ಪತ್ರಿಕೆಯನ್ನು ಖುದ್ದಾಗಿ ಕೊಟ್ಟು ಈ ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಆತ್ಮೀಯವಾಗಿ ಆಮಂತ್ರಿಸಿರುವುದು ಮತ್ತೊಂದು ವಿಶೇಷವಾಗಿದೆ. 
 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more