21 ದಿನ ವೃತಾಚಣೆ ಮಾಡಿ ಶಾರದೆ ರೂಪದಲ್ಲಿ ಮಿಂಚಿದ ಕ್ರಿಶ್ಚಿಯನ್ ಯುವತಿ

Oct 28, 2020, 8:57 PM IST

ಮಂಗಳೂರಿನ ಕ್ರಿಶ್ಚಿಯನ್‌ ಯುವತಿಯೊಬ್ಬರು ನವರಾತ್ರಿ ಸಂದರ್ಭದಲ್ಲಿ ಶಾರದೆಯ ಫೋಟೊಶೂಟ್‌ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು 21 ದಿನಗಳ ಕಾಲ ವೃತಾಚರಣೆ ಮಾಡಿರುವುದು ವಿಶೇಷ.

ಇತ್ತೀಚೆಗೆ ಫ್ಯಾಶನ್‌ಗಾಗಿ ಶಾರದೆಯ ಫೋಟೊ ಶೂಟ್‌ ನಡೆಸುವುದು ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಧಾರ್ಮಿಕತೆಗೆ ಧಕ್ಕೆಬಾರದಂತೆ ವೃತಾಚರಣೆ ಮಾಡಿ ಮಂಗಳೂರಿನ ಅನೀಶಾ ಗಮನ ಸೆಳೆದಿದ್ದಾರೆ.

'ಈಗ್ಯಾಕೆ ನಿಮ್ಮ ಬಾಯಿ ಮುಚ್ಚಿದೆ..?' ಗರ್ಭಿಣಿ ಕರೀನಾಳನ್ನ ಜೈಲಿಗಟ್ಟಬೇಕು ಎಂದ ಕಂಗನಾ

ಕ್ರೈಸ್ತ ಸಮುದಾಯವರೇ ಆದ ಮರ್ಸಿ ಲೇಡಿಸ್‌ ಸೆಲೂನ್‌ನ ಮರ್ಸಿ ವೀಣಾ ಡಿಸೋಜ ನೇತೃತ್ವದಲ್ಲಿ ಅನೀಶಾ ಅವರಿಗೆ ಪ್ರಸಾದನ ನಡೆದಿತ್ತು. ಪಾತ್‌ವೇ ಎಂಟರ್‌ಪ್ರೈಸಸ್‌ನ ದೀಪಕ್‌ ಗಂಗೂಲಿ ಸಂಯೋಜನೆಯಲ್ಲಿ ಛಾಯಾಗ್ರಾಹಕ ವರ್ಷಿಲ್‌ ಅಂಚನ್‌ ಫೋಟೊ ಶೂಟ್‌ ಮಾಡಿದ್ದಾರೆ.