KGF + ಪುಷ್ಪ!  ನೀಲ್​​ ಕಲ್ಪನೆಯಲ್ಲಿ 'ರಾವಣಂ' ಅವತಾರ! ಇಬ್ಬರೂ ಸೇರಿದ್ರೆ ಆಗುತ್ತಾ ಬ್ಲ್ಯಾಕ್ ಬಸ್ಟರ್?

KGF + ಪುಷ್ಪ! ನೀಲ್​​ ಕಲ್ಪನೆಯಲ್ಲಿ 'ರಾವಣಂ' ಅವತಾರ! ಇಬ್ಬರೂ ಸೇರಿದ್ರೆ ಆಗುತ್ತಾ ಬ್ಲ್ಯಾಕ್ ಬಸ್ಟರ್?

Published : Jun 26, 2025, 02:50 PM IST
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್, ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ಜೊತೆ 'ರಾವಣಂ' ಸಿನಿಮಾ ಮಾಡುವ ಸಾಧ್ಯತೆ ಇದೆ. ಈ ಸಿನಿಮಾ ಕೆಜಿಎಫ್ ಮಟ್ಟದ ಯಶಸ್ಸು ಕಾಣುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

KGF + ಪುಷ್ಪ!  ನೀಲ್​​ ಕಲ್ಪನೆಯಲ್ಲಿ 'ರಾವಣಂ' ಅವತಾರ! ಇಬ್ಬರೂ ಸೇರಿದ್ರೆ ಆಗುತ್ತಾ ಬ್ಲ್ಯಾಕ್ ಬಸ್ಟರ್?

ಟಾಲಿವುಡ್ ಪುಷ್ಪರಾಜ್ ಅಲ್ಲು ಅರ್ಜುನ್​​ ಪುಷ್ಪ ಸಿನಿಮಾ ಮಾಡಿ ಕೆಜಿಎಫ್​ ಸಿನಿಮಾಗೆ ಸವಾಲ್ ಹಾಕಿದ್ರು. ನಮ್​ ಪುಷ್ಪ ಸಿನಿಮಾ ಕೆಜಿಎಫ್​​ಗಿಂತಲೂ 10 ಪಟ್ಟು ದೊಡ್ಡ ಸಕ್ಸಸ್​ ಆಗುತ್ತೆ ಅಂತ ಆ ಸಿನಿಮಾ ಬಗ್ಗೆ ಟಾಲಿವುಡ್​​ನ ಕೆಲವರು ಬಾಯ್ ಬಾಯ್ ಬಡ್ಕೊಂಡಿದ್ರು. ಆದ್ರೆ ಎಷ್ಟೇ ಬಾಯ್ ಬಡ್ಕೊಂಡ್ರು ಅದು ನಿಜ ಆಗ್ಲಿಲ್ಲ. ಕೆಜಿಎಫ್​ ಸಿನಿಮಾ ಬರೆದ ದಾಖಲೆಗಳನ್ನ ಪುಷ್ಪನಿಂದ ಬ್ರೇಕ್ ಮಾಡೋಕೆ ಆಗ್ಲೇ ಇಲ್ಲ. ಇದೀಗ ಅಲ್ಲು ಅರ್ಜುನ್​​​​ ಕೆಜಿಎಫ್​​​​ನ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್​ ಹಿಂದೆ ಬಿದ್ದು ನನಗೊಂದು ಸಿನಿಮಾ ಮಾಡ್ಕೊಡಿ ಅಂತ ಕೇಳುತ್ತಿದ್ದಾರೆ. ಅದಕ್ಕೆ ವೇಧಿಕೆ ಕೂಡ ಸಿದ್ಧವಾಗಿದೆ. ಟಾಲಿವುಡ್​​​ನಲ್ಲಿ ಈ ಬಗ್ಗೆಯೇ ದೊಡ್ಡ ಚರ್ಚೆ ನಡೆಯುತ್ತಿದೆ.

ಕೆಜಿಎಫ್​​​ ಸಿನಿಮಾ ಬಂದು ವರ್ಷಗಳೆ ಉರುಳಿವೆ. ಆದ್ರೆ ಆ ಸಿನಿಮಾ ಹುಟ್ಟಿಸಿರೋ ಪ್ಯಾನ್​ ಇಂಡಿಯಾ ಅನ್ನೋ ಮಾಯೆ ಮಾತ್ರ ಸಿನಿಮಾ ರಂಗದವರ ಮಾತನ್ನೇ ಕೇಳುತ್ತಿಲ್ಲ. ಯಾವ್ದೇ ಸಿನಿಮಾ ಬಂದ್ರು ಕೆಜಿಎಫ್​ ಲೆವೆಲ್​​​ಗೆ ಇರುತ್ತಾ ಅಂತ ಸಿನಿಮಾ ಭಕ್ತರು ಕೇಳುತ್ತಾರೆ. ಅಂತಹ ಬ್ಲ್ಯಾಕ್ ಬಸ್ಟರ್ ಹಿಟ್ ಕೊಟ್ಟ ಡೈರೆಕ್ಟರ್ ಪ್ರಶಾಂತ್ ನೀತ್​ ತನ್ನ ಬತ್ತಳಿಕೆಯಿಂದ ಬರುತ್ತಿರೋ ಸಿನಿಮಾಗಳನ್ನೆಲ್ಲಾ ಕೆಜಿಎಫ್​ ಲೆವೆಲ್​ನಲ್ಲೇ ಚಿತ್ರೀಕರಿಸುತ್ತಿದ್ದಾರೆ. ಸಲಾರ್​ ಸಿನಿಮಾವನ್ನೂ ಕೆಜಿಎಫ್​ ರೀತಿಯೇ ತೋರಿಸಿದ್ರು. ಈಗ ರೆಡಿ ಆಗುತ್ತಿರೋ ಜ್ಯೂ.ಎನ್​​ಟಿಆರ್​ ಸಿನಿಮಾ ಕೂಡ ಅದೇ ತರಾ ಇರುತ್ತೆ ಅನ್ನೋ ನಿರೀಕ್ಷೆ ಇದೆ. ಇದರ ಮಧ್ಯೆ ಯಶ್​ರ ಕೆಜಿಎಫ್ ಡೈರೆಕ್ಟರ್​ ಜೊತೆ ಅಲ್ಲು ಅರ್ಜುನ್ ಸಿನಿಮಾ ಲಾಕ್ ಆಗಿರೋ ಬಗ್ಗೆ ಬಿಸಿ ಬಿಸಿ ಚರ್ಚೆಯೊಂದು ಜೋರಾಗಿ ನಡೆಯುತ್ತಿದೆ..

ಪ್ರಶಾಂತ್ ನೀಲ್ ನನಗೊಂದು ಸಿನಿಮಾ ಮಾಡ್ಲಿ ಅನ್ನೋದು ಸೌತ್​​​​​ನ ಹಲವು ಸ್ಟಾರ್ ನಟರ ಆಸೆ. ರಾಜಮೌಳಿ ಸಿನಿಮಾದಲ್ಲಿ ನಟಿಸೋಕೆ ಸ್ಟಾರ್ ನಟರು ಹೇಗೆ ಹಾತೊರೆಯುತ್ತಾರೋ ಹಾಗೆ ಪ್ರಶಾಂತ್ ನೀಲ್​​ ಆ್ಯಕ್ಷನ್​ ಕಟ್​​ನಲ್ಲಿ ನಟಿಸಬೇಕು ಅಂತ ಕಾಯುತ್ತಿರೋರು ಹಲವರು. ಅವರಲ್ಲೊಬ್ಬರು ಪುಷ್ಪರಾಜ್​ ಅಲಿಯಾಸ್​ ಅಲ್ಲು ಅರ್ಜುನ್. ಈಗ ಅಲ್ಲುಗೆ ಆ ಅದೃಷ್ಟದ ಭಾಗಿಲು ತೆರೆದಂತಿದೆ. ಅಲ್ಲು ಅರ್ಜುನ್​ ಜೊತೆ ನೀಲ್ ಸಿನಿಮಾ ಮಾಡುತ್ತಾರಂತೆ. ನೀಲ್​​ ಕಲ್ಪನೆಯಲ್ಲಿ ಬರೋ ಆ ಸಿನಿಮಾಗೆ ರಾವಣಂ ಎಂದು ಟೈಟಲ್​ ಕೂಡ ಇಡಲಾಗಿದೆಯಂತೆ.

ಅಲ್ಲು ಅರ್ಜುನ್ ಸದ್ಯ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಡೈರೆಕ್ಟರ್​ ಪ್ರಶಾಂತ್ ನೀಲ್ ಜೂನಿಯರ್ ಎನ್​ಟಿಆರ್ ಸಿನಿಮಾ ಶೂಟ್​​ಗಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿದ್ದಾರೆ. ಈಗ ಪ್ರಶಾಂತ್ ನೀಲ್ ಅಲ್ಲು ಜೊತೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿದೆ. KGF ಡೈರೆಕ್ಟರ್​ - ಪುಷ್ಪ ಆ್ಯಕ್ಟರ್​ ಸೇರಿದ್ರೆ ಅಲ್ಲೊಂದು ಬ್ಲ್ಯಾಕ್​ ಬಸ್ಟರ್ ಸಿನಿಮಾ ಬರುತ್ತೆ ಅನ್ನೋದ್ರಲ್ಲಿ ನೋ ಡೌಟ್​.. ಆದ್ರೆ ಈ ಬಗ್ಗೆ ಅಲ್ಲು ಆಗ್ಲಿ, ನೀಲ್ ಆಗ್ಲಿ ಗುಟ್ಟು ಬಿಟ್ಟಿಲ್ಲ ಅನ್ನೋದು ನಿಮ್ಗೆ ಗೊತ್ತಿರಲಿ..

ವಿಜಯ್ ಪಟೆದಾರ್​, ಏಷ್ಯಾನೆಟ್ ಸುವರ್ಣ ನ್ಯೂಸ್

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
Read more