
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಸೋಮವಾರ, ಚತುರ್ಥಿ ತಿಥಿ, ಪೂರ್ವಾಷಾಢ ನಕ್ಷತ್ರ.
ಸೋಮವಾರ ಶಿವನ ಸ್ಮರಣೆ ಮಾಡಿ, ಶಿವ ಎಂದರೇ ಮಂಗಳ ಎಂದರ್ಥ. ಮಂಗಳ ಫಲಗಳಿಗಾಗಿ ಈಶ್ವರನ ಪ್ರಾರ್ಥನೆ ಮಾಡಿ. ಮೀನಾ ರಾಶಿಯವರಿಗೆ ವ್ಯವಹಾರಗಳಲ್ಲಿ ತೊಡಕು. ಸಂಗಾತಿಯಲ್ಲಿ ಭಿನ್ನಾಭಿಪ್ರಾಯ. ವೃತ್ತಿಯಲ್ಲಿ ಒತ್ತಡ. ಈಶ್ವರನಿಗೆ ಅಷ್ಟೋತ್ತರ ಸೇವೆ ಮಾಡಿಸಿ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಲಾಭದಾಯಕ ದಿನ. ವ್ಯಯ ಹಾಗೂ ನಿರಾಸೆಯ ದಿನ. ಲಲಿತಾಸಹಸ್ರನಾಮ ಪಠಿಸಿ.
ಇದನ್ನೂ ವೀಕ್ಷಿಸಿ: ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ 25ನೇ ವಾರ್ಷಿಕೋತ್ಸವ: ಬ್ರಹ್ಮೋತ್ಸವದ ಅಂಗವಾಗಿ ಕುಂಭಮೇಳ