
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,ಶುಕ್ರವಾರ, ಷಷ್ಠಿ ತಿಥಿ, ಕೃತ್ತಿಕಾ ನಕ್ಷತ್ರ.
ಷಷ್ಠಿ ತಿಥಿ ಇರುವುದರಿಂದ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ. ಕುಜ ಇಂದು ಕುಂಭ ರಾಶಿ ಪ್ರವೇಶ ಮಾಡಲಿದ್ದಾನೆ. ರೋಗ ಬಾಧೆಗೆ ಕುಜ ಕಾರಣವಾಗಿರುತ್ತಾನೆ. ತುಲಾ ರಾಶಿಯವರಿಗೆ ಪರಿಶ್ರಮದ ದಿನ. ಕಾರ್ಯವ್ಯರ್ಥ. ಸಂಗಾತಿಯಲ್ಲಿ ಮನಸ್ಥಾಪ. ಉದರ ಬಾಧೆ. ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ಭೂ ವ್ಯವಹಾರದಲ್ಲಿ ಲಾಭ. ಪ್ರಯಾಣದಲ್ಲಿ ತೊಡಕು. ಸಾಲಬಾಧೆ. ಸಂಗಾತಿಯ ಸಹಕಾರ. ನರಸಿಂಹ ಸನ್ನಿಧಾನಕ್ಕೆ ತುಳಸಿ ಸಮರ್ಪಣೆ ಮಾಡಿ.
ಇದನ್ನೂ ವೀಕ್ಷಿಸಿ: ವೃಶ್ಚಿಕ ರಾಶಿಯವರು ದಶ ಮುಖದ ರುದ್ರಾಕ್ಷಿ ಧರಿಸುವುದರಿಂದ ಸಿಗುವ ಫಲವೇನು ?