
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಶನಿವಾರ, ಅಷ್ಟಮಿ ತಿಥಿ, ಉತ್ತರಾಭಾದ್ರ ನಕ್ಷತ್ರ.
ಈ ದಿನ ಶನಿ ದೇವನಿಗೆ ಪ್ರಿಯವಾದ ವಾರವಾಗಿದೆ. ಬುಧ ಇಂದು ಕರ್ಕಟಕ ರಾಶಿ ಪ್ರವೇಶ ಮಾಡುತ್ತಿದ್ದಾನೆ. ಚಂದ್ರನ ಮನೆಯಲ್ಲಿ ಬುಧನ ಸಂಚಾರವಾಗಲಿದೆ. ಮಿಥುನ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸ. ದೇಹಬಲ ಕುಸಿಯಲಿದೆ. ವೃತ್ತಿಯಲ್ಲಿ ಕಿರಿಕಿರಿ. ಸ್ತ್ರೀಯರಿಗೆ ಹಣಕಾಸಿನ ತೊಡಕು. ಅನ್ನಪೂರ್ಣೇಶ್ವರೀ ಪ್ರಾರ್ಥನೆ ಮಾಡಿ. ಕರ್ಕಕಟ ರಾಶಿಯವರಿಗೆ ವೃತ್ತಿಯಲ್ಲಿ ವಿಶೇಷ ಅನುಕೂಲ. ಸಾಹಸದ ಸಾಧನೆ. ಅನಗತ್ಯ ವ್ಯಯ. ಆರೋಗ್ಯದಲ್ಲಿ ವ್ಯತ್ಯಾಸ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ಆಂಜನೇಯ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: ಸ್ವಾಮೀಜಿಗಳ ಸಿಎಂ ಬದಲಾವಣೆ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ..!