
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಚತುರ್ಥಿ ತಿಥಿ, ಶ್ರವಣ ನಕ್ಷತ್ರ.
ಮಂಗಳವಾರ ಸಂಕಷ್ಟ ಚತುರ್ಥಿ ಸಹ ಬಂದಿದ್ದು, ಇದನ್ನು ಅಂಗಾರಕ ಸಂಕಷ್ಟ ಎನ್ನಲಾಗುತ್ತದೆ. ಈ ಹಬ್ಬವನ್ನು ಸಂಪೂರ್ಣವಾಗಿ ಗಣೇಶನಿಗೆ ಸಮರ್ಪಿಸಲಾಗಿದೆ. ಆದ್ದರಿಂದ, ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ದಿನಾಂಕದಂದು ಗಣೇಶನನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಏಕಾಗ್ರತೆ ಇರಲಿದೆ. ಸಜ್ಜನರ ಭೇಟಿ. ದೇವತಾ ಕಾರ್ಯಗಳು ನಡೆಯಲಿವೆ. ಲಲಿತಾ ಸಹಸ್ರನಾಮ ಪಠಿಸಿ.
ಇದನ್ನೂ ವೀಕ್ಷಿಸಿ: ಸಂವಿಧಾನ ಪುಸ್ತಕ ಅರವಿಂದ ಬೆಲ್ಲದ ಕಣ್ಣಿಗೆ ಬೈಬಲ್ ರೀತಿ ಕಾಣುತ್ತೆ ಅಂದ್ರೆ ಕಣ್ಣುಗಳ ತಪಾಸಣೆ ಮಾಡಿಸಬೇಕು: ಸಂತೋಷ ಲಾಡ್