
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಸೋಮವಾರ, ದಶಮಿ ತಿಥಿ, ಅಶ್ವಿನಿ ನಕ್ಷತ್ರ.
ಈ ದಿನವನ್ನು ಬುಧ ಜಯಂತಿ ಎಂದು ಆಚರಿಸಲಾಗುತ್ತದೆ. ಚಂದ್ರ ಹಾಗೂ ತಾರ ಇಬ್ಬರಿಗೆ ಜನಿಸಿದವನು ಬುಧನಾಗಿದ್ದಾನೆ. ನವಗ್ರಹಗಳಲ್ಲಿ ಅತ್ಯಂತ ಬುದ್ಧಿಶಾಲಿ ಗ್ರಹವೆಂದರೇ ಅದು ಬುಧ. ಮಿಥುನ ರಾಶಿಯವರಿಗೆ ಮಾತಿನ ಬಲವಿದೆ. ಕಾರ್ಯ ಸಾಧನೆ. ವ್ಯಾಪಾರಿಗಳಿಗೆ ಲಾಭ. ಮಕ್ಕಳಿಂದ ಸ್ವಲ್ಪ ಕಿರಿಕಿರಿ. ಲಲಿತಾ ಸಹಸ್ರನಾಮ ಪಠಿಸಿ. ಕರ್ಕಟಕ ರಾಶಿಯವರಿಗೆ ವೃತ್ತಿಯಲ್ಲಿ ಪ್ರಶಂಸೆ. ಹೋಟೆಲ್, ಪೊಲೀಸ್ ಕ್ಷೇತ್ರದವರಿಗೆ ಅನುಕೂಲ. ಕೃಷಿ-ವಸ್ತ್ರ ವ್ಯಾಪಾರಿಗಳಿಗೆ ಲಾಭ. ಪ್ರಯಾಣದಲ್ಲಿ ತೊಡಕು. ಗ್ರಾಮ ದೇವತಾದರ್ಶನ ಮಾಡಿ.
ಇದನ್ನೂ ವೀಕ್ಷಿಸಿ: Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲಬಾಧೆ ಕಾಡಲಿದ್ದು, ಸಂಗಾತಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ..