ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಶನಿವಾರ, ದ್ವಿತೀಯ ತಿಥಿ, ಆಶ್ಲೇಷ ನಕ್ಷತ್ರ.
ಆಶ್ಲೇಷ ನಕ್ಷತ್ರ ಇರುವುದರಿಂದ ನಾಗರ ಕಲ್ಲಿಗೆ ಹಾಲು ಅಥವಾ ಎಳೆನೀರಿನ ಅಭಿಷೇಕ ಮಾಡಿ. ಇಲ್ಲವೇ ಅಕ್ಕಿ ಅಥವಾ ಬೆಲ್ಲದ ಅನ್ನವನ್ನು ನೈವೇದ್ಯ ಮಾಡಿ. ಇದರಿಂದ ನಿಮ್ಮ ರೋಗಗಳು ದೂರವಾಗಿ, ನಿಮಗೆ ಧೈರ್ಯ ಬರಲಿದೆ. ಮಿಥುನ ರಾಶಿಯವರಿಗೆ ಅನ್ನ ಸಮೃದ್ಧಿ ಜೊತೆಗೆ ಮಾತಿನ ಸೌಖ್ಯ ಸಹ ಇರಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಿದ್ದು, ಸ್ತ್ರೀಯರಿಗೆ ಮಾನ್ಯತೆ ದೊರೆಯಲಿದೆ. ವೃತ್ತಿಯಲ್ಲಿ ಅನುಕೂಲವಿದೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ.
ಇದನ್ನೂ ವೀಕ್ಷಿಸಿ: Jagadish Shettar: ಕೈಗೆ ಶೆಟ್ಟರ್ ಶಾಕ್.. ಕನ್ಫರ್ಮ್ ಆಯ್ತಾ ಬೆಳಗಾವಿ ಲೋಕಸಭೆ ಟಿಕೆಟ್..?