ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ,ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಪೂರ್ವಾಷಾಢ ನಕ್ಷತ್ರ.
ಮಾರ್ಗಶಿರ ಮಾಸದ ತೃತೀಯ ತಿಥಿ ಅಮ್ಮನವರ ಕಾಲವನ್ನು ಸೂಚಿಸುತ್ತದೆ. ಇಂದು ಲಲಿತಾ ಸಹಸ್ರನಾಮವನ್ನು ಪಠಿಸಿ. ಮಿಥುನ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅನುಕೂಲ. ಹಿರಿಯರ ಸಹಕಾರ. ಮಾತಿನ ಕೌಶಲ್ಯ. ಕಾರ್ಯ ಸಾಧನೆ. ವಿದ್ಯಾರ್ಥಿಗಳಿಗೆ ಉತ್ತಮಫಲ. ಸೋಲುಂಟಾಗುವ ಸಾಧ್ಯತೆ. ಈಶ್ವರ ಪ್ರಾರ್ಥನೆ ಮಾಡಿ. ಕರ್ಕಟಕ ವೃತ್ತಿಯಲ್ಲಿ ಅನುಕೂಲ. ನೀರಿನ ಸಮೃದ್ಧಿ. ಹಾಲು-ಹೈನು-ವಸ್ತ್ರ ವ್ಯಾಪಾರಿಗಳಿಗೆ ಉತ್ತಮಫಲ. ಸಂಗಾತಿಯಲ್ಲಿ ಅಸಮಾಧಾನ. ಶಿವಶಕ್ತಿಯರ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: ದೈವಾರಾಧನೆ ಬಿಸ್ನೆಸ್: ಅಪಚಾರ, ಅವಹೇಳನ ವಿರುದ್ಧ ಹೋರಾಡಲು ಹೊಸ ಸಂಘಟನೆ ಅಸ್ತಿತ್ವಕ್ಕೆ!