Jun 10, 2022, 11:41 AM IST
ಇಲ್ಲೊಂದುಕಡೆ ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ತನ್ನ ಹುಡುಗಿಗೆ ರಿಂಗ್ ಹಾಕಿ ಪ್ರಪೋಸ್ ಮಾಡಲು ಮುಂದಾಗಿದ್ದ. ಇದನ್ನೇ ಬಳಸಿಕೊಂಡ ಕಳ್ಳನೋರ್ವ ಓಡಿ ಬಂದು ಹುಡುಗನ ಕೈಲಿದ್ದ ರಿಂಗ್ ಅನ್ನು ಕಸಿದು ಅಲ್ಲಿಂದ ಪರಾರಿಯಾಗಿದ್ದಾನೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಮತ್ತೊಂದೆಡೆ
ಇಲ್ಲೊಂದು ಕಡೆ ಓರ್ವ ಯುವಕ ಹಾಗೂ ಇಬ್ಬರು ಯುವತಿಯರು ನಡು ರಸ್ತೆಯಲ್ಲೇ ಪೊಲೀಸರ ಮೇಲೆ ಎರಗಿ ಬಿದ್ದು ಹಲ್ಲೆ ನಡೆಸಿದ್ದಾರೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಓರ್ವ ವ್ಯಕ್ತಿ ಮತ್ತು ಇಬ್ಬರು ಯುವತಿಯರು ಪೊಲೀಸರು ಮತ್ತು ಟ್ರಾಫಿಕ್ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಹಲ್ಲೆ ನಡೆಸಿದ್ದಾರೆ.
ಟ್ರಾಫಿಕ್ ಪೊಲೀಸರ ಪ್ರಕಾರ, ಇವ್ರು ರಾಂಗ್ ಸೈಡ್‌ನಿಂದ ಬರ್ತಿದ್ರು. ಜೊತೆಗೆ ನಂಬರ್ ಪ್ಲೇಟ್ ಇಲ್ಲದ ಬೈಕ್. ಅಲ್ದೆ ಹೆಲ್ಮೆಟ್ ಇಲ್ಲದೆ ಟ್ರಿಪಲ್ ರೈಡಿಂಗ್ ಮಾಡಿದ್ದಕ್ಕಾಗಿ ಅವರನ್ನು ನಿಲ್ಲಿಸಿ ಪರಿಶೀಲನೆ ನಡೆಸಲಾಗ್ತಿತ್ತು.. ಈವೇಳೆ ಏಕಾ ಏಕಿ ಈ ಮೂವರು ಪೊಲೀಸರ ಮೇಲೆ ಈ ರೀತಿ ಎರಗಿದ್ರು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ತಲೆಗೆ ಗಾಯವಾಗಿದ್ದು. ಸ್ಥಳೀಯ ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.